ಪ್ರಜ್ವಲ್ ರೇವಣ್ಣ ಹಾಸಿಗೆ, ದಿಂಬನ್ನೇ ಕೊಂಡೊಯ್ದ ಎಸ್​ಐಟಿ!

|

Updated on: May 29, 2024 | 10:32 AM

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪ್ರಜ್ವಲ್​ ರೇವಣ್ಣ ಅವರ ವಿರುದ್ಧ ದೂರು ದಾಖಲಾಗಿದ್ದು, ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನು ಸಂಸದ ಪ್ರಜ್ವಲ್​ ರೇವಣ್ಣ ವಿದೇಶದಲ್ಲಿದ್ದು, ಮೇ 31 ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna) ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (SIT) ನಡೆಸುತ್ತಿದೆ. ಎಸ್​ಐಟಿ ಮತ್ತು ಎಫ್​ಎಸ್​ಎಲ್​​ ಅಧಿಕಾರಿಗಳು ಮಂಗಳವಾರ (ಮೇ 28)ರ ರಾತ್ರಿ ಹಾಸನ ನಗರದ ಆರ್.ಸಿ.ರಸ್ತೆಯಲ್ಲಿರುವ ಪ್ರಜ್ವಲ್​ ರೇವಣ್ಣ ಅವರ ಮನೆಯಲ್ಲಿ ಪರಿಶೀಲನೆ ಆರಂಭಿಸಿ, ಇಂದು (ಮೇ 29) ನಸುಕಿನ ಜಾವ 4ರವರೆಗೆ ಎಸ್​ಐಟಿ ಮತ್ತು ಎಫ್​ಎಸ್​ಎಲ್​​ ಅಧಿಕಾರಿಗಳು ಪರಿಶೀಲನೆ ಮಾಡಿದರು.

ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಎಸ್​ಐಟಿ, ಎಫ್​ಎಸ್​ಎಲ್​ ಅಧಿಕಾರಿಗಳು ಪ್ರಜ್ವಲ್​ ರೇವಣ್ಣ ಅವರ ಮನೆಯಲ್ಲಿ ವಿವಿಧ ಕಡೆ ಬೆರಳಚ್ಚು ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಪ್ರಜ್ವಲ್​ ರೇವಣ್ಣ ಮಲಗುವ ಕೊಠಡಿಯಲ್ಲಿನ ಹಾಸಿಗೆ, ದಿಂಬು, ಹೊದಿಕೆ ಸೇರಿದಂತೆ ಇತರೆ ವಸ್ತುಗಳನ್ನು ಎಸ್​ಐಟಿ, ಎಫ್​ಎಸ್​​ಎಲ್​​ ತಂಡ ತೆಗೆದುಕೊಂಡು ಹೋಗಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್

ಇನ್ನು ಪ್ರಕರಣ ಸಂಬಂಧ ವಿಚಾರಣೆಗೆ ಮೇ 31ರಂದು ಹಾಜರಾಗುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ನಿಗೂಡ ಸ್ಥಳದಲ್ಲಿ ಕೂತು ವಿಡಿಯೋ ಮೂಲಕ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Follow us on