ಪ್ರಜ್ವಲ್ ರೇವಣ್ಣರನ್ನ ದೇಶ ಬಿಡುವಂತೆ ಮಾಡಿದ್ದೇ ರಾಜ್ಯ ಸರ್ಕಾರ: ಪ್ರಲ್ಹಾದ್ ಜೋಶಿ ಕಿಡಿ​

| Updated By: ಕಿರಣ್ ಹನುಮಂತ್​ ಮಾದಾರ್

Updated on: May 25, 2024 | 9:59 PM

ಪ್ರಜ್ವಲ್ ರೇವಣ್ಣರನ್ನ ದೇಶ ಬಿಡುವಂತೆ ಮಾಡಿದ್ದೇ ರಾಜ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi)ಕಿಡಿಕಾರಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್​ ಪಾಸ್​​ಪೋರ್ಟ್​ ರದ್ದತಿ ವಿಚಾರದಲ್ಲಿ ವಿಳಂಬ ಮಾಡ್ತಿಲ್ಲ. ಸಾಮಾನ್ಯ ವ್ಯಕ್ತಿಯ ಪಾಸ್​​ಪೋರ್ಟ್ ರದ್ದತಿಗೂ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆ ಬಿಟ್ಟು ನಾವು ಏನೂ ಮಾಡಲು ಬರುವುದಿಲ್ಲ ಎಂದರು.

ಹುಬ್ಬಳ್ಳಿ, ಮೇ.25: ಪ್ರಜ್ವಲ್ ರೇವಣ್ಣರನ್ನ ದೇಶ ಬಿಡುವಂತೆ ಮಾಡಿದ್ದೇ ರಾಜ್ಯ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi)ಕಿಡಿಕಾರಿದ್ದಾರೆ. ಹುಬ್ಬಳ್ಳಿ(Hubballi)ಯಲ್ಲಿ ಮಾತನಾಡಿದ ಅವರು, ‘ಪ್ರಜ್ವಲ್​ ಪಾಸ್​​ಪೋರ್ಟ್​ ರದ್ದತಿ ವಿಚಾರದಲ್ಲಿ ವಿಳಂಬ ಮಾಡ್ತಿಲ್ಲ. ಸಾಮಾನ್ಯ ವ್ಯಕ್ತಿಯ ಪಾಸ್​​ಪೋರ್ಟ್ ರದ್ದತಿಗೂ ಒಂದು ಪ್ರಕ್ರಿಯೆ ಇರುತ್ತೆ. ಆ ಪ್ರಕ್ರಿಯೆ ಬಿಟ್ಟು ನಾವು ಏನೂ ಮಾಡಲು ಬರುವುದಿಲ್ಲ. ಪ್ರಧಾನಿ, ವಿದೇಶಾಂಗ ಸಚಿವರು ಸೇರಿ ಯಾರಿಗೇ ಪತ್ರ ಬರೆದರೂ ಆಗಲ್ಲ. ಯಾರ ಮೇಲೆ ಏನು ಆರೋಪ ಇದೆ, ಎಫ್​ಐಆರ್​ನಲ್ಲಿ ಏನಿದೆ?. ಎಲ್ಲಾ ವಿಚಾರಗಳನ್ನು ಕೇಂದ್ರ ಸರ್ಕಾರಕ್ಕೆ ಪೊಲೀಸ್ ಇಲಾಖೆಗೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಪತ್ರ ಬರೆದು ರಾಜಕೀಯ ಮಾಡಿದ್ರೆ ಆಗಲ್ಲ. ಪ್ರಜ್ವಲ್​ ವಿರುದ್ಧ ಆರೋಪ ಬಂದಾಗಿಂದಲೂ ಬಂಧಿಸುವಂತೆ ಒತ್ತಾಯ ಮಾಡಿದ್ದೇವೆ. ಆತನ ವಿಚಾರದಲ್ಲಿ ಕದ್ದುಮುಚ್ಚಿ ಮಾತಾಡಿಲ್ಲ. ಆದರೆ, ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ವಿರುದ್ಧ ಆರೋಪ ಮಾಡುತ್ತಿದೆ. ದುರುದ್ದೇಶದಿಂದ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಇದಾಗಿದೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ