ಕಬ್ಬು ಅರೆದು ಹಾಲು ತೆಗೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಇದೇ ಜನವರಿ 12 ರಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ರಾಯಚೂರು-ಮಂತ್ರಾಲಯ ಮಾರ್ಗ ಮಧ್ಯೆ ಕಬ್ಬಿನ ಹಾಲಿನ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅಂಗಡಿಯಲ್ಲಿ ಖುದ್ದು ತಾವೇ ಮಷಿನ್ಗೆ ಕಬ್ಬು ಹಾಕಿ, ಹಾಲು ತೆಗೆದಿದ್ದಾರೆ.
ರಾಯಚೂರು, ಜನವರಿ 14: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಇದೇ ಜನವರಿ 12 ರಂದು ಕುಟುಂಬ ಸಮೇತರಾಗಿ ಮಂತ್ರಾಲಯಕ್ಕೆ ಹೋಗುತ್ತಿದ್ದರು. ರಾಯಚೂರು-ಮಂತ್ರಾಲಯ ಮಾರ್ಗ ಮಧ್ಯೆ ಕಬ್ಬಿನ ಹಾಲಿನ ಅಂಗಡಿ ಬಳಿ ಕಾರು ನಿಲ್ಲಿಸಿದ್ದಾರೆ. ಬಳಿಕ ಅಂಗಡಿಯಲ್ಲಿ ಖುದ್ದು ತಾವೇ ಮಷಿನ್ಗೆ ಕಬ್ಬು ಹಾಕಿ, ಹಾಲು ತೆಗೆದಿದ್ದಾರೆ. ಪ್ರಹ್ಲಾದ್ ಜೋಶಿ ಅವರು ಕಬ್ಬಿನಿಂದ ಹಾಲು ತೆಗೆಯುವ ಸನ್ನಿವೇಶ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲ್ಲದೇ ಖುದ್ದು ಪ್ರಹ್ಲಾದ್ ಜೋಶಿ ಅವರೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದು, “ವಿದೇಶಿ ಪಾನೀಯಗಳ ಬದಲು ನಮ್ಮ ದೇಶದ ಸ್ವಾದ ಕಬ್ಬಿನ ಹಾಲು ಬಲು ಚಂದ” ಎಂದು ಕ್ಯಾಪ್ಶನ್ ಬೆರೆದಿದ್ದಾರೆ. ಇದಕ್ಕೆ ನೆಟ್ಟಿಗರು “ವಿದೇಶಿ ಪಾನೀಯಗಿಂತ ದೇಶಿ ಪಾನೀಯಕ್ಕೆ ಒತ್ತು ನೀಡಿ” ಅಂತ ಪ್ರಹ್ಲಾದ್ ಜೋಶಿ ಅವರು ಸಂದೇಶ ಸಾರಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

