Operation Sindoor: ತಮ್ಮೊಂದಿಗೆ ಬಂದಿದ್ದ ಸೈನಿಕರ ಹಣೆಗೆ ತಿಲಕವಿಟ್ಟು ಸಂಭ್ರಮಿಸಿದ ಪ್ರಮೋದ್ ಮುತಾಲಿಕ್

Updated on: May 07, 2025 | 6:54 PM

ಇದು ಇಷ್ಟಕ್ಕೆ ನಿಲ್ಲಬಾರದು, ಪಾಕಿಸ್ತಾನದ ಇನ್ನೂ ಯಾವ್ಯಾವ ಭಾಗಗಳಲ್ಲಿ ಉಗ್ರರು ಅಡಗಿ ಕೂತಿದ್ದಾರೋ ಅವರನ್ನೆಲ್ಲ ಕೊಲ್ಲಬೇಕು, ಕಳೆದ 78 ವರ್ಷಗಳಲ್ಲಿ ಅವರು ಲಕ್ಷಾಂತರ ಭಾರತೀಯ ಮಹಿಳೆಯರ ಸಿಂಧೂರವನ್ನು ಅವರು ಅಳಸಿಹಾಕಿದ್ದಾರೆ, ಮುಂದಿನ ನೂರು ವರ್ಷಗಳ ಕಾಲ ಪಾಕಿಸ್ತಾನೀಯರು ತಲೆಯೆತ್ತದ ಹಾಗೆ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಹುಬ್ಬಳ್ಳಿ, ಮೇ 7: ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಇಂದು ಹುಬ್ಬಳ್ಳಿಯಲ್ಲಿ ಆಪರೇಷನ್ ಸಿಂಧೂರ ಯಶಸ್ಸಿನ ಬಗ್ಗೆ ಮಾತಾಡುವ ಮೊದಲು ತಮ್ಮೊಂದಿಗೆ ಬಂದಿದ್ದ ಮೂವರು ಮಾಜಿ ಸೈನಿಕರ (ex servicemen) ಹಣೆಗಳಿಗೆ ತಿಲಕವನ್ನಿಟ್ಟು ಸಂಭ್ರಮಿಸಿದರು. ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಕಳೆದ ರಾತ್ರಿ ಪಾಕಿಸ್ತಾನದ 9 ಕಡೆಗಳಲ್ಲಿದ್ದ ಉಗ್ರ ನೆಲೆಗಳನ್ನು ಧ್ವಂಸ ಮಾಡಿದೆ, ನಮ್ಮ ಸೈನಿಕರಿಗೆ ಮೊದಲ ಅಭಿನಂದನೆಗಳು ಮತ್ತು ಸೆಲ್ಯೂಟ್ ಎಂದು ಮುತಾಲಿಕ್ ಹೇಳಿದರು. ಮುಂದುವರಿದು ಮಾತಾಡಿದ ಅವರು ಸೇನೆ ಕಾರ್ಯಾಚರಣೆ ನಡೆಸಲು ಮುಕ್ತ ಅವಕಾಶ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಅಭಿನಂದನೆ ಎಂದು ಹೇಳಿದರು.

ಇದನ್ನೂ ಓದಿ:  ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ