‘ಸಲಾರ್ 2’ ನಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಪ್ರಮೋದ್ ಮಾತು
Salaar 2: ‘ಸಲಾರ್’ ಸಿನಿಮಾದಲ್ಲಿ ನಟಿಸಿರುವ ಹಲವು ಕನ್ನಡ ನಟರಲ್ಲಿ ಪ್ರಮೋದ್ ಪಂಜು ಸಹ ಒಬ್ಬರು. ‘ಸಲಾರ್ 2’ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
ಕನ್ನಡದ ಹಲವು ನಟರು ‘ಸಲಾರ್’ (Salaar) ಸಿನಿಮಾದಲ್ಲಿ ನಟಿಸಿದ್ದಾರೆ. ಅವರಲ್ಲಿ ಪ್ರತಿಭಾವಂತ ಯುವನಟ ಪ್ರಮೋದ್ ಪಂಜು ಸಹ ಒಬ್ಬರು. ಸಿನಿಮಾದ ಪ್ರಮುಖ ಪಾತ್ರ ಪೃಥ್ವಿರಾಜ್ ಸುಕುಮಾರ್ ಅವರ ಸಹೋದರ ಬಾಚಿ ಮನ್ನಾರ್ ಪಾತ್ರದಲ್ಲಿ ಪ್ರಮೋದ್ ಅದ್ಭುತವಾಗಿ ನಟಿಸಿದ್ದಾರೆ. ಇದೀಗ ಪ್ರಮೋದ್, ‘ಸಲಾರ್ 2’ ಸಿನಿಮಾದಲ್ಲಿ ತಮ್ಮ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಮಾತನಾಡಿದ್ದಾರೆ. ಪ್ರಶಾಂತ್ ನೀಲ್ ಅವರು ಈಗಾಗಲೇ ಹೇಳಿದ್ದಾರೆ, ‘ಸಲಾರ್ 2’ ಸಿನಿಮಾದಲ್ಲಿ ನನ್ನ ಪಾತ್ರ ಹೆಚ್ಚಿಗರಲಿದೆ ಎಂದು. ನಾನು ಸಹ ‘ಸಲಾರ್ 2’ ಸಿನಿಮಾದಲ್ಲಿ ನನ್ನ ಪಾತ್ರದಲ್ಲಿ ನಟಿಸುವುದನ್ನು ಹೆಚ್ಚು ಎಂಜಾಯ್ ಮಾಡಲಿದ್ದೇನೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ