‘ಸಲಾರ್’ಮಲ್ಲಿ ನಟಿಸಲು ಷರತ್ತೊಂದನ್ನು ಇರಿಸಿದ್ದರು ಶ್ರಿಯಾ ರೆಡ್ಡಿ: ಏನದು?

Sriya Reddy-Salaar: ‘ಸಲಾರ್’ ಸಿನಿಮಾದ ರಾಧಾ ರಮಾ ಮನ್ನಾರ್ ಪಾತ್ರದಲ್ಲಿ ನಟಿಸಲು ಪ್ರಶಾಂತ್ ನೀಲ್​ ಮುಂದೆ ಷರತ್ತೊಂದನ್ನು ಇಟ್ಟಿದ್ದರಂತೆ ನಟಿ ಶ್ರಿಯಾ ರೆಡ್ಡಿ. ಏನದು?

‘ಸಲಾರ್’ಮಲ್ಲಿ ನಟಿಸಲು ಷರತ್ತೊಂದನ್ನು ಇರಿಸಿದ್ದರು ಶ್ರಿಯಾ ರೆಡ್ಡಿ: ಏನದು?
Follow us
ಮಂಜುನಾಥ ಸಿ.
|

Updated on: Dec 29, 2023 | 9:00 PM

ಪ್ರಭಾಸ್ (Prabhas) ನಟನೆಯ ‘ಸಲಾರ್’ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಳ್ಳುವತ್ತ ಸಾಗಿದೆ. ಒಟ್ಟಿಗೆ ಬಿಡುಗಡೆ ಆದ ಶಾರುಖ್ ಖಾನ್​ರ ‘ಡಂಕಿ’ ಸಿನಿಮಾವನ್ನು ಸುಲಭವಾಗಿ ಹಿಂದಿಕ್ಕಿ ಬಾಕ್ಸ್ ಆಫೀಸ್​ನಲ್ಲಿ ಮುನ್ನುಗ್ಗುತ್ತಿದೆ. ಪ್ರಭಾಸ್ ಅಭಿಮಾನಿಗಳಿಗೆ ‘ಸಲಾರ್’ ಸಖತ್ ಹಿಡಿಸಿದೆ. ಸಿನಿಮಾದಲ್ಲಿ ಸೃಷ್ಟಿಸಲಾಗಿರುವ ಪ್ರಪಂಚ, ಸಿನಿಮಾದ ಭಿನ್ನ ಪಾತ್ರಗಳು ಎಲ್ಲವನ್ನೂ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. ಅದರಲ್ಲಿಯೂ ಸಿನಿಮಾದಲ್ಲಿ ಬರುವ ಪವರ್​ಫುಲ್ ಪಾತ್ರಗಳ ಬಗ್ಗೆ ಒಂದು ತೂಕ ಹೆಚ್ಚೇ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಪವರ್​ಫುಲ್ ಪಾತ್ರಗಳಲ್ಲಿ ರಾಧಾ ರಮಾ ಮನ್ನಾರ್.

ರಾಧಾ ರಮಾ ಮನ್ನಾರ್ ಪಾತ್ರ ಸಿನಿಮಾದ ಇತರೆ ಹಲವು ಪುರುಷ ಪಾತ್ರಗಳಷ್ಟೆ ಪವರ್​ಫುಲ್ ಆಗಿರುವ ಪಾತ್ರ. ಈ ಪಾತ್ರವನ್ನು ನಟಿ ಶ್ರಿಯಾ ರೆಡ್ಡಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಯ, ಲುಕ್​, ಬಾಡಿಲಾಂಗ್ವೇಜ್​ನಿಂದ ಪಾತ್ರಕ್ಕೆ ಒಳ್ಳೆಯ ಫೋರ್ಸ್ ತಂದಿದ್ದಾರೆ. ಆದರೆ ಪ್ರಶಾಂತ್ ನೀಲ್, ರಾಧಾ ರಮಾ ಮನ್ನಾರ್ ಪಾತ್ರದಲ್ಲಿ ನಟಿಸಬೇಕೆಂದು ಶ್ರಿಯಾ ರೆಡ್ಡಿಯವರನ್ನು ಕೇಳಿದಾಗ ಅವರು ಷರತ್ತೊಂದನ್ನು ಹಾಕಿದ್ದರಂತೆ.

‘‘ನಾನು ಬಹಳ ಕಟ್ಟು-ನಿಟ್ಟಿನ ನಟಿ. ನಾನು ಸಿನಿಮಾದಲ್ಲಿ ನಟಿಸಬೇಕೆಂದರೆ, ನಿಮ್ಮ ಸಿನಿಮಾದ ಮುಖ್ಯ ನಾಯಕ ನಟರಿದ್ದಾರಲ್ಲ, ಅವರಷ್ಟೆ ಶಕ್ತಿಶಾಲಿಯಾದ, ಪವರ್​ಫುಲ್ ಆದ ಪಾತ್ರ ನನ್ನದಾಗಿರಬೇಕು, ಇಲ್ಲವಾದರೆ ನಾನು ನಟಿಸುವುದಿಲ್ಲ’’ ಎಂದರಂತೆ. ಶ್ರಿಯಾ ರೆಡ್ಡಿಯ ಮಾತು ಕೇಳಿ ಪ್ರಶಾಂತ್ ನೀಲ್ ನಗಲು ಆರಂಭಿಸಿದರಂತೆ. ಯಾಕೆ ನಗುತ್ತಿದ್ದೀರ ಎಂದು ಕೇಳಿದಾಗ, ‘ರಾಧಾ ರಮಾ ಪಾತ್ರದ ಗುಣವೇ ಇದು, ಇತರರಿಗಿಂತಲೂ ನಾನು ಪವರ್​ಫುಲ್ ಆಗಿರಬೇಕು ಎಂಬುದೇ ಆ ಪಾತ್ರದ ಗುಣ, ನೀವು ಸಹ ಅದನ್ನೇ ಕೇಳುತ್ತಿದ್ದೀರಿ’’ ಎಂದರಂತೆ. ನೀಲ್​ರ ಆ ಮಾತಿನಿಂದಲೇ ರಾಧಾ ರಮಾ ಪಾತ್ರ ಎಷ್ಟು ಗಟ್ಟಿಯಾದುದು ಎಂದು ಅರ್ಥವಾಯ್ತಂತೆ ಶ್ರಿಯಾ ರೆಡ್ಡಿಗೆ.

ಇದನ್ನೂ ಓದಿ:‘ಸಲಾರ್’ ಸಿನಿಮಾದ ‘ರಾಧಾ ರಮಾ’ ಶ್ರಿಯಾ ರೆಡ್ಡಿ ಯಾರು ಗೊತ್ತೆ?

ಶ್ರಿಯಾ ರೆಡ್ಡಿ 2002ರಲ್ಲೇ ಚಿತ್ರರಂಗಕ್ಕೆ ಪ್ರವೇಶಿಸಿದವರು. ಈವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಪವರ್​ಫುಲ್ ಮಹಿಳೆಯ ಪಾತ್ರಗಳಲ್ಲಿ ಸಹ ಇದಕ್ಕೆ ಮುನ್ನ ನಟಿಸಿದ್ದಾರೆ. ಆದರೆ ‘ಸಲಾರ್’ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಜನಪ್ರಿಯತೆ ಧಕ್ಕಿದೆ.

‘ಸಲಾರ್’ ಸಿನಿಮಾದಲ್ಲಿ ಶ್ರಿಯಾ ರೆಡ್ಡಿ ಮಾತ್ರವೇ ಅಲ್ಲದೆ ಹಲವಾರು ಜನಪ್ರಿಯ ನಟರು ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರ್ ಮಾತ್ರವೇ ಅಲ್ಲದೆ, ಶ್ರುತಿ ಹಾಸನ್, ಜಗಪತಿ ಬಾಬು, ಟೀನು ಆನಂದ್, ಕನ್ನಡದ ಗರುಡ ರಾಮಚಂದ್ರ, ಮಧು ಗುರುಸ್ವಾಮಿ, ಬಾಬಿ ಸಿಂಹ, ಬ್ರಹ್ಮಾಜಿ, ನವೀನ್ ಪಂಜು, ಭಜರಂಗಿ ಲೋಕಿ, ದೇವರಾಜ್, ಸಪ್ತಗಿರಿ ಇನ್ನೂ ಹಲವು ಜನಪ್ರಿಯ ನಟರು ಸಿನಿಮಾದಲ್ಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ