Pranav Mohanlal: ‘ಹೃದಯಂ’ ಹೀರೋ ರೀತಿಯೇ ಕಾಣ್ತಾರೆ ಈ ಕನ್ನಡಿಗ; ಆದರೆ ಇವರು ಅವರಲ್ಲ

Edited By:

Updated on: Jul 24, 2023 | 10:23 PM

Prathap Gopal: ಪ್ರಣವ್​ ಮೋಹನ್​ಲಾಲ್​ ರೀತಿಯೇ ಪ್ರತಾಪ್​ ಗೋಪಾಲ್​ ಕೂಡ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದಾರೆ. ಒಳ್ಳೆಯ ಸಿನಿಮಾ ಮಾಡುವ ಕುರಿತು ಅವರು ಮಾತನಾಡಿದ್ದಾರೆ.

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹಲ್​ಲಾಲ್​ (Mohanlal) ಅವರ ಪುತ್ರ ಪ್ರಣವ್​ ಮೋಹನ್​ಲಾಲ್​ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ನಟಿಸಿದ ‘ಹೃದಯಂ’ ಸಿನಿಮಾ ಜನಮನ ಗೆದ್ದಿದೆ. ಬೆಂಗಳೂರಿನಲ್ಲಿ ಪ್ರಣವ್​ ಮೋಹನ್​ಲಾಲ್​ (Pranav Mohanlal) ಅವರನ್ನೇ ಹೋಲುವಂತಹ ಓರ್ವ ವ್ಯಕ್ತಿ ಇದ್ದಾರೆ. ಇವರ ಹೆಸರು ಪ್ರತಾಪ್​ ಗೋಪಾಲ್​. ಎಷ್ಟೋ ಜನರು ಇವರನ್ನು ಪ್ರಣವ್​ ಎಂದುಕೊಂಡು ಮಾತನಾಡಿಸುತ್ತಾರೆ. ಪ್ರತಾಪ್​ ಗೋಪಾಲ್​ (Prathap Gopal) ಅವರು ಕೂಡ ಚಿತ್ರರಂಗಕ್ಕೆ ಬರುವ ಉತ್ಸಾಹದಲ್ಲಿ ಇದ್ದಾರೆ. ಆ ಕುರಿತು ಅವರು ‘ಟಿವಿ9 ಕನ್ನಡ’ದ ಜೊತೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More