‘ಕೆಜಿಎಫ್ 2’ ಚಿತ್ರವನ್ನು ಪುನೀತ್ಗೆ ಅರ್ಪಿಸಿದ ಪ್ರಶಾಂತ್ ನೀಲ್
ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ‘ಕೆಜಿಎಫ್ 2’ ಸಿನಿಮಾವನ್ನು ಪುನೀತ್ಗೆ ಅರ್ಪಿಸುತ್ತಿರುವುದಾಗಿ ಪ್ರಶಾಂತ್ ನೀಲ್ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ನಾವು ಕಳೆದುಕೊಂಡಿದ್ದೇವೆ ಅನ್ನೋದನ್ನು ನಂಬಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅವರು ನಮ್ಮ ಜತೆಗೆ ಇಲ್ಲ ಎಂಬ ವಿಚಾರ ಕೋಟ್ಯಂತರ ಅಭಿಮಾನಿಗಳಿಗೆ ನೋವು ತಂದಿದೆ. ಪುನೀತ್ ರಾಜ್ಕುಮಾರ್ ಅವರಿಗೂ ಹೊಂಬಾಳೆ ಫಿಲ್ಮ್ಸ್ಗೂ ಒಳ್ಳೆಯ ನಂಟಿತ್ತು. ಹೊಂಬಾಳೆ ಫಿಲ್ಮ್ಸ್ನ ಮೊದಲ ಸಿನಿಮಾ ಪುನೀತ್ ಜತೆಗೆ ಅನ್ನೋದು ವಿಶೇಷ. ಈಗ ಇದೇ ಬ್ಯಾನರ್ನಿಂದ ಸಿದ್ಧಗೊಂಡಿರುವ ‘ಕೆಜಿಎಫ್ 2’ ಸಿನಿಮಾ (KGF Chapter 2) ನೋಡೋಕೆ ಅವರಿಲ್ಲ ಅನ್ನೋದು ದುಃಖದ ವಿಚಾರ. ಇಂದು (ಮಾರ್ಚ್ 27) ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ವೇಳೆ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ‘ಕೆಜಿಎಫ್ 2’ ಸಿನಿಮಾವನ್ನು ಪುನೀತ್ಗೆ ಅರ್ಪಿಸುತ್ತಿರುವುದಾಗಿ ಪ್ರಶಾಂತ್ ನೀಲ್ ಹೇಳಿದ್ದಾರೆ.
ಇದನ್ನೂ ಓದಿ:KGF chapter 2 Trailer: ರಾಕಿ vs ಅಧೀರ; ಇಲ್ಲಿದೆ ‘ಕೆಜಿಎಫ್ ಚಾಪ್ಟರ್ 2’ ಸ್ಟಿಲ್ಗಳು
‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್