ಪ್ರತಾಪ್ ಸಿಂಹ ಒಬ್ಬ ಪೊಲಿಟಿಕಲ್ ಟೆರರಿಸ್ಟ್: ಪ್ರೊ ಮಹೇಶ್‌ಚಂದ್ರ ಗುರು ವಾಗ್ದಾಳಿ

Edited By:

Updated on: Sep 10, 2023 | 3:59 PM

ಸಂಸದ ಪ್ರತಾಪ್​​ ಸಿಂಹ ನನ್ನ ಶಿಷ್ಯ. ಆತ​ ಒಬ್ಬ ಪೊಲಿಟಿಕಲ್ ಟೆರರಿಸ್ಟ್ ಎಂದು ಪ್ರೊ. ಮಹೇಶ್‌ ಚಂದ್ರ ಗುರು ವಾಗ್ದಾಳಿ ಮಾಡಿದ್ದಾರೆ. ನಗರದ ಮಾನಸ‌ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಾಪ್​​ ಸಿಂಹ ವಿರುದ್ದ ಕಿಡಿಕಾರಿದ್ದಾರೆ.

ಮೈಸೂರು, ಸೆಪ್ಟೆಂಬರ್​ 10: ಸಂಸದ ಪ್ರತಾಪ್​​ ಸಿಂಹ (Pratap Simha) ಒಬ್ಬ ಪೊಲಿಟಿಕಲ್ ಟೆರರಿಸ್ಟ್ ಎಂದು ಪ್ರೊ. ಮಹೇಶ್‌ ಚಂದ್ರ ಗುರು ವಾಗ್ದಾಳಿ ಮಾಡಿದ್ದಾರೆ. ನಗರದ ಮಾನಸ‌ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಾಪ್​​ ಸಿಂಹ ನನ್ನ ಶಿಷ್ಯ. ಅವರ ತಂದೆ ಹರಿದ ಬಟ್ಟೆಯಲ್ಲಿ ನೋಡಲು ಬಂದಾಗ ತಂದೆಯನ್ನೇ ಜೀತದ ಆಳು ಎಂದಿದ್ದ. ಆ ಸಂದರ್ಭದಲ್ಲಿ ನಾನು ಥಳಿಸಿ ಬುದ್ದಿ ಹೇಳಿದ್ದೆ. ಪ್ರತಾಪ ಸಿಂಹ ಒಳ್ಳೆಯವರಿಗೆ ಹುಟ್ಟಿಲ್ಲ. ಈ ಸಮಯದಲ್ಲಿ ಪಾಪಿಗಳನ್ನು ಏಕೆ ನೆನೆಸಿಕೊಳ್ಳುವುದು ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More