ಸುಳ್ಳು ಹೇಳುವುದನ್ನು ಕಲಿಯಲು ಪ್ರತಾಪ ಸಿಂಹರನ್ನು ಭೇಟಿಯಾಗುವೆ: ಎಂ ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿ

|

Updated on: Apr 27, 2024 | 7:35 PM

ಲಕ್ಷ್ಮಣ್ ಸುದ್ದಿಗೋಷ್ಟಿ ನಡೆಸುವಾಗ ಪ್ರತಾಪ ಸಿಂಹರನ್ನು ನೆನಯದಿದ್ದರೆ ಅದು ಅಪೂರ್ಣ ಅನಿಸಿಕೊಳ್ಳುತ್ತದೆ. ಇವತ್ತು ಸಹ ಹಾಲಿ ಸಂಸದರನ್ನು ನೆನಪಿಸಿಕೊಂಡ ಲಕ್ಷ್ಮಣ್, ಕಳೆದ 20-25 ದಿನಗಳಿಂದ ಅವರ ಪತ್ತೆಯಿಲ್ಲ, ಎಲ್ಲಿದ್ದಾರೋ ಗೊತ್ತಿಲ್ಲ, ಅದರೆ ಅವರನ್ನು ಭೇಟಿಯಾಗಿ ಸತ್ಯದ ನೆತ್ತಿಯಮೇಲೆ ಹೊಡೆದಂತೆ ಸುಳ್ಳು ಹೇಳುವುದು ಹೇಗೆ ಅನ್ನೋದನ್ನು ಕಲಿಯುವುದಾಗಿ ಹೇಳಿದರು.

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಂ ಲಕ್ಷ್ಮಣ್ (M Laxman) ಇಂದು ನಗರದಲ್ಲಿ ಸುದ್ದಿಗೋಷ್ಟಿಯೊಂದನ್ನು ನಡೆಸಿ ಚುನಾವಣಾ ಪ್ರಚಾರದಲ್ಲಿ ಹಗಲಿರುಳೆನ್ನದೆ ತಮಗಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ (party workers) ಕೃತಜ್ಞತೆ ಸಲ್ಲಿಸಿದರು. ಹಲವಾರು ಪ್ರಗತಿಪರ ಸಂಘಟನೆಗಳು, ದಲಿತ ಸಂಘರ್ಷ ಸಮಿತಿ, ರಾಜಕೀಯ ಪಕ್ಷಗಳಾದ ಆಪ್ (AAP), ಸಿಪಿಐ (CPI) ಮತ್ತು ಯಾರದಾದರೂ ಹೆಸರು ಮರೆತಿದ್ದರೆ ಅವರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದರು. ಮತದಾನದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಲಕ್ಷ್ಮಣ್, ಶೇಕಡಾ 80-85 ರಷ್ಟು ಮಹಿಳೆಯರು ತಮಗೆ ವೋಟು ಮಾಡಿರುವರೆಂದು ಹೇಳಿದರು. ಒಂದು ವೇಳೆ ತಾನು ಗೆದ್ದರೆ, ಕೊಡಗು ಮತ್ತು ಮೈಸೂರುನಲ್ಲಿ ಒಂದೊಂದು ಕಚೇರಿಯನ್ನು ಸ್ಥಾಪಿಸಿ 15 ಅಲ್ಲಿ ಮತ್ತು ಉಳಿದ 15 ದಿನ ಮೈಸೂರುನಲ್ಲಿರುವುದಾಗಿ ಹೇಳಿದರು.

ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಶಾಸಕರು ಯಾವುದೇ ಪಕ್ಷದವರಾಗಿದ್ದರೂ ಅವರೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ಮಾಡುವುದಾಗಿ ಅವರು ಹೇಳಿದರು. ಲಕ್ಷ್ಮಣ್ ಸುದ್ದಿಗೋಷ್ಟಿ ನಡೆಸುವಾಗ ಪ್ರತಾಪ ಸಿಂಹರನ್ನು ನೆನಯದಿದ್ದರೆ ಅದು ಅಪೂರ್ಣ ಅನಿಸಿಕೊಳ್ಳುತ್ತದೆ. ಇವತ್ತು ಸಹ ಹಾಲಿ ಸಂಸದರನ್ನು ನೆನಪಿಸಿಕೊಂಡ ಲಕ್ಷ್ಮಣ್, ಕಳೆದ 20-25 ದಿನಗಳಿಂದ ಅವರ ಪತ್ತೆಯಿಲ್ಲ, ಎಲ್ಲಿದ್ದಾರೋ ಗೊತ್ತಿಲ್ಲ, ಅದರೆ ಅವರನ್ನು ಭೇಟಿಯಾಗಿ ಸತ್ಯದ ನೆತ್ತಿಯಮೇಲೆ ಹೊಡೆದಂತೆ ಸುಳ್ಳು ಹೇಳುವುದು ಹೇಗೆ ಅನ್ನೋದನ್ನು ಕಲಿಯುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕಾನೂನು ಸಂಕಷ್ಟದಲ್ಲಿ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್; ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ