Belgaum Lok Sabha: ಪ್ರಧಾನಿ ಮೋದಿ ಸ್ವಾಗತಕ್ಕೆ ಬೆಳಗಾವಿ ಕಾರ್ಯಕರ್ತರಿಗೆ ಅವಕಾಶ: ವಿಡಿಯೋ
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹದಿನೈದು ವಿವಿಧ ಸಮುದಾಯ ಮುಖಂಡರು ಸಜ್ಜಾಗಿದ್ದಾರೆ. ಬೆಳಗಾವಿ ಲೋಕಸಭಾ ವ್ಯಾಪ್ತಿಯ ಹದಿನೈದು ಜನರಿಗೆ ಪ್ರಧಾನಿ ಮೋದಿ ಸ್ವಾಗತಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಬೆಳಗಾವಿಗೆ ನಾಲ್ಕು ಜನ ಸ್ವಾಗತಕಾರರು ಆಗಮಿಸಿದ್ದಾರೆ. ಮೋದಿ ಸ್ವಾಗತಕ್ಕೆ ಬಹಳ ಕಾತುರತೆಯಿಂದ ಕಾಯ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಳಗಾವಿ, ಏಪ್ರಿಲ್ 27: ಮೇ 7ರಂದು ರಾಜ್ಯದಲ್ಲಿ ಎರಡನೇ ಹಂತದ ಮತದಾನ ಹಿನ್ನೆಲೆ ಇಂದು ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮಿಸಲಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಹದಿನೈದು ವಿವಿಧ ಸಮುದಾಯ ಮುಖಂಡರು ಸಜ್ಜಾಗಿದ್ದಾರೆ. ಬೆಳಗಾವಿ ಲೋಕಸಭಾ (Belgaum Lok Sabha constituency) ವ್ಯಾಪ್ತಿಯ ಹದಿನೈದು ಜನರಿಗೆ ಪ್ರಧಾನಿ ಮೋದಿ ಸ್ವಾಗತಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಬೆಳಗಾವಿಗೆ ನಾಲ್ಕು ಜನ ಸ್ವಾಗತಕಾರರು ಆಗಮಿಸಿದ್ದಾರೆ. ಮೋದಿ ಸ್ವಾಗತಕ್ಕೆ ಬಹಳ ಕಾತುರತೆಯಿಂದ ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ಕನಸಲ್ಲೂ ಅಂದುಕೊಂಡಿರಲಿಲ್ಲ ಇಂದು ಅವರನ್ನ ಸ್ವಾಗತ ಮಾಡುತ್ತಿರುವು ಖುಷಿ ಇದೆ ಎಂದು ಟಿವಿ9 ಮುಂದೆ ನಯನಾ ಭಸ್ಮೆ, ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್ ಮತ್ತು ಸುಭಾಷ್ ಸಣ್ಣವೀರಪ್ಪನವರ್ ಸಂತಸ ಹಂಚಿಕೊಂಡಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನಡೆಸಿರುವ ಮಾತುಕತೆ ಇಲ್ಲಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.