ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಹೆಚ್ಚು ಫಲ ಸಿಗುತ್ತದೆ ಎಂದು ತಲಕಾಡುನಲ್ಲಿ ಪುಣ್ಯಸ್ನಾನ ಮಾಡಿ ಹೇಳಿದ ಶಿವಕುಮಾರ್
ಹಾಗೆ ನೋಡಿದರೆ ಟೀ ನರಸೀಪುರ ತ್ರಿವೇಣಿ ಸಂಗಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಣ್ಯ ಸ್ನಾನ ಮಾಡಬೇಕಿತ್ತು, ಅದರೆ ಅವರು ಮೊಣಕಾಲಿನ ಚಿಕಿತ್ಸೆಗೊಳಗಾಗಿ ವ್ಹೀಲ್ ಚೇರಲ್ಲಿ ಓಡಾಡುತ್ತಿರುವುದರಿಂದ ಶಿವಕುಮಾರ್ ಅವರನ್ನೇ ಇಲ್ಲಿಗೆ ಬರಲು ಹೇಳಿದ್ದರಂತೆ. ಅದೆಲ್ಲ ಸರಿ, ಶಿವಕುಮಾರ್ ಅವರು ಕೊನೆಯಲ್ಲಿ ಎಲ್ಲರೂ ಪ್ರಯಾಗ್ರಾಜ್ ಕುಂಭಮೇಳದಲ್ಲಿ ಭಾಗಿಯಾಗಬೇಕು ಅಂತೇನಿಲ್ಲ ಎಂದು ಹೇಳುವುದು ಅರ್ಥವಾಗಲ್ಲ!
ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ರಾಜ್ ಮತ್ತು ಮೈಸೂರು ಜಿಲ್ಲೆಯ ತಲಕಾಡು ತ್ರಿವೇಣಿ ಸಂಗಮ ಎರಡೂ ಕಡೆ ಪುಣ್ಯಸ್ನಾನ ಮಾಡಿದವರು ಬಹಳ ಜನ ಇರಲಾರರು. ಆದರೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎರಡೂ ಕಡೆ ಮುಳುಗು ಹಾಕಿ ಪುಣ್ಯ ಪ್ರಾಪ್ತಿ ಮಾಡಿಕೊಂಡಿದ್ದಾರೆ. ಟೀ ನರಸೀಪುರ ಬಳಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ನದಿಗಳು ಕೂಡುವ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಪುಣ್ಯಸ್ನಾನ ಮಾಡಿದ್ದರ ಬಗ್ಗೆ ಮತ್ತು ಅದರ ಇತಿಹಾಸದ ಬಗ್ಗೆ ಶಿವಕುಮಾರ್ ಬಹಳ ಅಭಿಮಾನದಿಂದ ಮಾತಾಡುತ್ತಾರೆ. ಪುಣ್ಯಸ್ನಾನದ ಬಗ್ಗೆ ಹೇಳುವಾಗ ಅವರು ಪ್ರಯತ್ನಕ್ಕಿಂತ ಪ್ರಾರ್ಥನೆಯಿಂದ ಹೆಚ್ಚು ಫಲ ಸಿಗುತ್ತದೆ ಎಂದು ಅವರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಹಾಕುಂಭ; ತ್ರಿವೇಣಿ ಸಂಗಮದಲ್ಲಿ ಕುಟುಂಬದೊಂದಿಗೆ ಮುಖೇಶ್ ಅಂಬಾನಿ ಪವಿತ್ರ ಸ್ನಾನ