ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ನವದೆಹಲಿಯ ದ್ವಾರಕಾ ಸೆಕ್ಟರ್ 10ರಲ್ಲಿರುವ ಶ್ರೀ ರಾಮ್ ಲೀಲಾ ಕಮಿಟಿ ಮೈದಾನದಲ್ಲಿ ನಡೆದ ವೈಭವದ ದಸರಾ ಮಹೋತ್ಸವದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಂಕೇತಿಕವಾಗಿ ಬಾಣ ಹೂಡುವ ಮೂಲಕ 'ರಾವಣ ದಹನ' ನೆರವೇರಿಸಿದರು. ಅಧರ್ಮದ ಮೇಲೆ ಧರ್ಮದ ಹಾಗೂ ಕೆಡಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಸ್ಸಿನಿಂದ ಸಾಂಕೇತಿಕವಾಗಿ ಬಾಣವನ್ನು ಬಿಡುವ ಮೂಲಕ ಬೃಹತ್ ರಾವಣನ ಪುತ್ಥಳಿಗೆ ಬೆಂಕಿ ಸ್ಪರ್ಶಿಸಿದರು. ಇದರೊಂದಿಗೆ ರಾವಣ ಹಾಗೂ ಆತನ ಸಂಹಾರದ ಸಂಕೇತವಾಗಿ ಪಟಾಕಿಗಳು ಸಿಡಿದು ರಾವಣ ದಹನ ವೈಭವದಿಂದ ನೆರವೇರಿತು.
ನವದೆಹಲಿ, ಅಕ್ಟೋಬರ್ 20: ವಿಜಯದಶಮಿಯ ದಿನವಾದ ಇಂದು ನವದೆಹಲಿಯ ದ್ವಾರಕಾ ಸೆಕ್ಟರ್ 10ರಲ್ಲಿರುವ ಶ್ರೀ ರಾಮ್ ಲೀಲಾ ಕಮಿಟಿ ಮೈದಾನದಲ್ಲಿ ನಡೆದ ವೈಭವದ ದಸರಾ ಮಹೋತ್ಸವದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಾಂಕೇತಿಕವಾಗಿ ಬಾಣ ಹೂಡುವ ಮೂಲಕ ‘ರಾವಣ ದಹನ’ ನೆರವೇರಿಸಿದರು. ಅಧರ್ಮದ ಮೇಲೆ ಧರ್ಮದ ಹಾಗೂ ಕೆಡಕಿನ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧನಸ್ಸಿನಿಂದ ಸಾಂಕೇತಿಕವಾಗಿ ಬಾಣವನ್ನು ಬಿಡುವ ಮೂಲಕ ಬೃಹತ್ ರಾವಣನ ಪುತ್ಥಳಿಗೆ ಬೆಂಕಿ ಸ್ಪರ್ಶಿಸಿದರು. ಇದರೊಂದಿಗೆ ರಾವಣ ಹಾಗೂ ಆತನ ಸಂಹಾರದ ಸಂಕೇತವಾಗಿ ಪಟಾಕಿಗಳು ಸಿಡಿದು ರಾವಣ ದಹನ ವೈಭವದಿಂದ ನೆರವೇರಿತು.
ಈ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ದಸರಾ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಶ್ರೀರಾಮನ ಆದರ್ಶಗಳು, ಸತ್ಯ, ಧರ್ಮ ಮತ್ತು ಸದಾಚಾರದ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕೆಂದು ಕರೆ ನೀಡಿದರು. ದ್ವಾರಕಾದ ಶ್ರೀ ರಾಮ್‌ಲೀಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಸಾರ್ವಜನಿಕರು ಭಾಗವಹಿಸಿ ವಿಜಯದಶಮಿಯ ರಾವಣ ದಹನದ ಕ್ಷಣಗಳನ್ನು ಕಣ್ತುಂಬಿಕೊಂಡರು. ರಾಷ್ಟ್ರಪತಿಗಳ ಉಪಸ್ಥಿತಿಯ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ದೆಹಲಿ ಪೊಲೀಸರು ಅತ್ಯಂತ ಬಿಗಿ ಭದ್ರತೆಯನ್ನು ಕೈಗೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

