ರಾಮಮಂದಿರ ಜ್ಞಾಪಕಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಮಿನಿಯೇಚರ್ ಶೀಟಿಗೆ ಸೂರ್ಯಕಿರಣಗಳ ಹೊಂಬಣ್ಣದ ಎಲೆ ಮತ್ತು ಚೌಪಾಯಿ ವಿಶಿಷ್ಟ ಮೆರಗನ್ನು ನೀಡುತ್ತವೆ. ಪಂಚಭೂತಗಳೆಂದು ಕರೆಸಿಕೊಳ್ಳುವ ಆಕಾಶ, ಗಾಳಿ, ಅಗ್ನಿ, ಭೂಮಿ ಮತ್ತು ನೀರು ಮೊದಲಾದ ಭೌತಿಕ ಅಂಶಗಳು ಬಗೆಬಗೆಯ ವಿನ್ಯಾಸಗಳಲ್ಲಿ ಪ್ರತಿಫಲಿತಗೊಂಡಿದ್ದು ಸಕಲ ಅಭಿವ್ಯಕ್ತಿಗೆ ಅವಶ್ಯವಾಗಿರುವ ಪಂಚಮಹಾಭೂತಗಳೊಂದಿಗೆ ಅನನ್ಯ ಮತ್ತು ಪರಿಪೂರ್ಣ ಸಾಮರಸ್ಯ ಹೊಂದಿವೆ.

ರಾಮಮಂದಿರ ಜ್ಞಾಪಕಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
|

Updated on:Jan 18, 2024 | 4:36 PM

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ದೆಹಲಿಯಲ್ಲಿ ರಾಮ ಜನ್ಮಭೂಮಿ ಮಂದಿರ ಸ್ಮರಣಾರ್ಥ ಅಂಚೆಚೀಟಿಗಳನ್ನು (postage stamps) ಮತ್ತು ಪ್ರಭು ರಾಮನ (Lord Ram) ಮೇಲೆ ವಿಶ್ವದ ನಾನಾದೇಶಗಳಲ್ಲಿ ಬಿಡುಗಡೆಯಾಗಿರುವ ಅಂಚೆಚೀಟಿಗಳ ಒಂದು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು. ಅಂಚೆಚೀಟಿಗಳಲ್ಲಿ ರಾಮಮಂದಿರ, ಚೌಪಾಯಿ ಮಂಗಲ್ ಭವನ್ ಮತ್ತು ಅಮಂಗಲ್ ಭವನ್, ಸೂರ್ಯ, ಸರಯೂ ನದಿ ಮತ್ತು ಮಂದಿರದ ಸುತ್ತ ಕಾಣುವ ಶಿಲ್ಪಗಳನ್ನು ನೋಡಬಹುದು. ರಾಮ ಮಂದಿರ, ಭಗವಾನ್ ಗಣೇಶ, ಭಗವಾನ್ ಹನುಮಾನ್, ಜಟಾಯು, ಕೇವತ್ ರಾಜ್ ಮತ್ತು ಮಾ ಶಬರಿ ಒಳಗೊಂಡ 6 ಅಂಚೆಚೀಟಿಗಳನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಮಿನಿಯೇಚರ್ ಶೀಟಿಗೆ ಸೂರ್ಯಕಿರಣಗಳ ಹೊಂಬಣ್ಣದ ಎಲೆ ಮತ್ತು ಚೌಪಾಯಿ ವಿಶಿಷ್ಟ ಮೆರಗನ್ನು ನೀಡುತ್ತವೆ. ಪಂಚಭೂತಗಳೆಂದು ಕರೆಸಿಕೊಳ್ಳುವ ಆಕಾಶ, ಗಾಳಿ, ಅಗ್ನಿ, ಭೂಮಿ ಮತ್ತು ನೀರು ಮೊದಲಾದ ಭೌತಿಕ ಅಂಶಗಳು ಬಗೆಬಗೆಯ ವಿನ್ಯಾಸಗಳಲ್ಲಿ ಪ್ರತಿಫಲಿತಗೊಂಡಿದ್ದು ಸಕಲ ಅಭಿವ್ಯಕ್ತಿಗೆ ಅವಶ್ಯವಾಗಿರುವ ಪಂಚಮಹಾಭೂತಗಳೊಂದಿಗೆ ಅನನ್ಯ ಮತ್ತು ಪರಿಪೂರ್ಣ ಸಾಮರಸ್ಯ ಹೊಂದಿವೆ.

ಬೇರೆ ಬೇರೆ ಸಮುದಾಯಗಳ ಮೇಲೆ ಪ್ರಭು ರಾಮನಗಿರುವ ಅಂತಾರಾಷ್ಟ್ರೀಯ ಅಪೀಲನ್ನು ಸ್ಟ್ಯಾಂಪ್ ಪುಸ್ತಕದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ಯುಎಸ್, ನ್ಯೂಜಿಲೆಂಡ್, ಸಿಂಗಾಪೂರ್, ಕೆನಡಾ, ಕಾಂಬೋಡಿಯ ಮತ್ತು ವಿಶ್ವಸಂಸ್ಥೆ ಒಳಗೊಂಡಂತೆ 20 ದೇಶಗಳು ಬಿಡುಗಡೆ ಮಾಡಿರುವ ಅಂಚೆಚೀಟಿಗಳನ್ನು 48-ಪುಟಗಳ ಪುಸ್ತಕದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:35 pm, Thu, 18 January 24

Follow us