ಒಂದೇ ಬಸ್ಗೆ ಎರಡು ರಾಜ್ಯಗಳ ನಂಬರ್ ಪ್ಲೇಟ್ ಕಂಡು RTO ಅಧಿಕಾರಿಗಳೇ ದಂಗು!
ಕೋಲಾರ ಜಿಲ್ಲೆಯ ಎನ್.ಜಿ. ಹುಲ್ಕೂರು ಗ್ರಾಮದ ಬಳಿ ಸಾರಿಗೆ ಇಲಾಖೆ ಅಧಿಕಾರಿಗಳು ಖಾಸಗಿ ಬಸ್ಸನ್ನು ವಶಪಡಿಸಿಕೊಂಡಿದ್ದಾರೆ. ಒಂದೇ ಬಸ್ ಕರ್ನಾಟಕ ಮತ್ತು ಆಂಧ್ರ ಪ್ರದೇಶ ನೋಂದಣಿಯ ನಂಬರ್ ಪ್ಲೇಟ್ಗಳನ್ನು ಹೊಂದಿದ್ದು, ತೆರಿಗೆ ವಂಚನೆಯ ದೊಡ್ಡ ದೋಖಾ ಬಯಲಾಗಿದೆ. ವೈ.ಜಿ.ಎಸ್. ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ವಾಹನದ ದಾಖಲೆಗಳು ಬೋಗಸ್ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಕೋಲಾರ, ಜನವರಿ 14: ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಗಡಿಭಾಗದ ಎನ್.ಜಿ. ಹುಲ್ಕೂರು ಗ್ರಾಮದ ಬಳಿ ಸಾರಿಗೆ ಇಲಾಖೆಯ ಅಧಿಕಾರಿಗಳು ಖಾಸಗಿ ಬಸ್ ಸಂಸ್ಥೆಯ ತೆರಿಗೆ ವಂಚನೆಯನ್ನು ಬಯಲಿಗೆಳೆದಿದ್ದಾರೆ. ಆಂಧ್ರಪ್ರದೇಶದಿಂದ ಬರುತ್ತಿದ್ದ ಖಾಸಗಿ ಬಸ್ಸನ್ನು ತಪಾಸಣೆ ನಡೆಸಿದಾಗ, ಒಂದೇ ವಾಹನಕ್ಕೆ ಎರಡು ಬೇರೆ ಬೇರೆ ನೋಂದಣಿ ಸಂಖ್ಯೆಗಳಿರುವುದು ಪತ್ತೆಯಾಗಿದೆ. ಬಸ್‌ನ ಹಿಂಭಾಗದಲ್ಲಿ ಆಂಧ್ರಪ್ರದೇಶದ ನೋಂದಣಿ ಸಂಖ್ಯೆ ಇದ್ದರೆ, ಮುಂಭಾಗದಲ್ಲಿ ಮಂಗಳೂರಿನ ನೋಂದಣಿ ಸಂಖ್ಯೆ ಪ್ರದರ್ಶಿಸಲಾಗಿತ್ತು. ಅಲ್ಲದೆ, ಬಸ್‌ನ ಚಾಸಿ ಸಂಖ್ಯೆ ಪರಿಶೀಲಿಸಿದಾಗ ಅದು ಮೈಸೂರಿನ ನೋಂದಣಿಗೆ ಸಂಬಂಧಿಸಿದೆ ಎಂಬುದು ತಿಳಿದುಬಂದಿದೆ. ಬಾಗೇಪಲ್ಲಿಯ ವೈ.ಜಿ.ಎಸ್. ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಈ ಬಸ್ ತೆರಿಗೆ ವಂಚನೆ ಮಾಡಿ ಸಂಚರಿಸುತ್ತಿದ್ದ ಹಿನ್ನೆಲೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಬಸ್ಸನ್ನು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

