ಕರ್ನಾಟಕ ಬುಲ್ಡೋಜರ್ಸ್ ಆಟಗಾರರಿಗೆ ತಿಲಕ ಇಟ್ಟು ವಿಶ್ ಮಾಡಿದ ಪ್ರಿಯಾ ಸುದೀಪ್
ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಸಿಸಿಎಲ್ನ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡದ ಎದುರು ಹಣಾಹಣಿ ನಡೆಸುತ್ತಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರನ್ನು ಹುರಿದುಂಬಿಸಲು ಅನೇಕ ತಾರೆಯರು ತಿರುವನಂತಪುರಂಗೆ ತೆರಳಿದ್ದಾರೆ. ಪ್ರಿಯಾ ಸುದೀಪ್ ಅವರು ಕರ್ನಾಟಕ ಬುಲ್ಡೋಜರ್ಸ್ ಆಟಗಾರರಿಗೆ ತಿಲಕ ಇಟ್ಟು ವಿಶ್ ಮಾಡಿದ್ದಾರೆ.
ತಿರುವನಂತಪುರಂನಲ್ಲಿ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ (Celebrity Cricket League) ಫೈನಲ್ ಪಂದ್ಯ ನಡೆಯುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳು ಅಂತಿಮ ಪಂದ್ಯದಲ್ಲಿ ಹಣಾಹಣಿ ನಡೆಸುತ್ತಿವೆ. 10 ಓವರ್ಗಳ ಎರಡು ಇನ್ನಿಂಗ್ಸ್ನಲ್ಲಿ ಸೆಣೆಸಾಟ ನಡೆಯುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕಂಡದಲ್ಲಿ ಕಿಚ್ಚ ಸುದೀಪ್, ಜೆಕೆ, ಡಾರ್ಲಿಂಗ್ ಕೃಷ್ಣ, ಸುನೀಲ್ ರಾವ್, ಪ್ರದೀಪ್ ಮುಂತಾದವರು ಆಡುತ್ತಿದ್ದಾರೆ. ಆಟಗಾರರನ್ನು ಹುರಿದುಂಬಿಸಲು ಕನ್ನಡ ಚಿತ್ರರಂಗದ ಅನೇಕ ತಾರೆಯರು ತಿರುವನಂತಪುರಂಗೆ ತೆರಳಿದ್ದಾರೆ. ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಕೂಡ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರಿಗೆ ತಿಲಕ ಇಟ್ಟು ಪ್ರಿಯಾ ಸುದೀಪ್ (Priya Sudeep) ಅವರು ಆಲ್ದಿ ಬೆಸ್ಟ್ ಹೇಳಿದ್ದಾರೆ. ಬೆಂಗಾಲ್ ಟೈಗರ್ಸ್ ತಂಡವು 10 ಓವರ್ಗಳ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ 118 ರನ್ ಕಲೆಹಾಕಿದೆ. ಕರ್ನಾಟಕ ಬುಲ್ಡೋಜರ್ಸ್ ಗೆಲ್ಲಬೇಕು ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ನಟನೆಯ ಜೊತೆಗೆ ಕ್ರಿಕೆಟ್ನಲ್ಲೂ ಅಪಾರ ಆಸಕ್ತಿ ಹೊಂದಿದ್ದಾರೆ. ಸಿಸಿಎಲ್ನಲ್ಲಿ ಅವರು ಸಕ್ರಿಯವಾಗಿ ಭಾಗಿ ಆಗುತ್ತಾರೆ. ಎಲ್ಲ ಭಾಷೆಯ ಸೆಲೆಬ್ರಿಟಿಗಳನ್ನು ಒಂದೆಡೆ ಸೇರಿಸುವಲ್ಲಿಯೂ ಸಿಸಿಎಲ್ ಮಹತ್ವದ ಪಾತ್ರ ವಹಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.