ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ: ಕಾರಣ ಇಲ್ಲಿದೆ

Edited By:

Updated on: Sep 11, 2026 | 12:40 PM

ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ ಎಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಹಿಟ್‌ಲಿಸ್ಟ್‌ನಲ್ಲಿ ತಾವೇ ಮೊದಲ ಸ್ಥಾನದಲ್ಲಿದ್ದು, ಇಂತಹ ಬೆದರಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅಲ್ಲದೆ ತಮ್ಮ ಮೇಲಿನ ಆರೋಪಗಳಿಗೆ ಸದನದಲ್ಲಿಯೇ ಅವರು ದಾಖಲೆ ನೀಡಲಿ ಎಂದು ಬಹಿರಂಗ ಸವಾಲೆಸೆದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​​ 11: ಸಚಿವ ಸತೀಶ್​​ ಜಾರಕಿಹೊಳಿ ಅವರ ಮೇಲೆ ನಡೆದಿರುವ ಇಡಿ ದಾಳಿ ರಾಜಕೀಯ ಪ್ರೇರಿತಿ. ಇಂತಹ ರೇಡ್​​ಗಳು ವಿಪಕ್ಷಗಳ ನಾಯಕರ ಮೇಲೆ ಮಾತ್ರ ಯಾಕೆ ನಡೆಯುತ್ತವೆ? ಎಂದು ಕರ್ನಾಟಕ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಪ್ರಶ್ನಿಸಿದ್ದಾರೆ. ಇನ್ನೂ ಹಲವು ಸಚಿವರು ಕಿಕ್​​ಔಟ್​​ ಆಗುತ್ತಾರೆ ಎಂಬ ಬಿಜೆಪಿಗರ ಆರೋಪದ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಆರೋಪಗಳಿಗೆ ದಾಖಲೆ ನೀಡಿ ಬಿಜೆಪಿಗರು ರಾಜೀನಾಮೆ ಕೇಳಲಿ. ಆರ್​​ಎಸ್​​ಎಸ್​​ ಮತ್ತು ಬಿಜೆಪಿಗರ ಹಿಟ್​​ಲಿಸ್ಟ್​​ನಲ್ಲಿ ನಾನೇ ಮೊದಲ ಸ್ಥಾನದಲ್ಲಿದ್ದೇನೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಅವರು ಬಹಿರಂಗ ಸವಾಲು ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us