ರಾಮನ ಹೆಸರಲ್ಲೇ ಲೂಟಿ ಮಾಡುವ ಬಿಜೆಪಿಯವರು ಮಂಜುನಾಥಸ್ವಾಮಿ ಹೆಸರಿನಲ್ಲಿ ಸತ್ಯ ಹೇಳ್ತಾರಾ?: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ವಿಚಾರ ಸಂಬಂಧ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ತನ್ನ ಆಂತರಿಕ ಭಿನ್ನಾಭಿಪ್ರಾಯ, ಅಡ್ಡ ಮತದಾನದ ಬಗ್ಗೆ ಗಮನ ಹರಿಸಬೇಕು. ರಾಮನ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದವರು ಮಂಜುನಾಥ ಸ್ವಾಮಿ ಹೆಸರಲ್ಲಿ ಸತ್ಯ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಒಗ್ಗಟ್ಟಿನ ಬಗ್ಗೆ ಬಿಜೆಪಿ ಚಿಂತೆ ಬಿಡಲಿ ಎಂದಿದ್ದಾರೆ.
ಬೆಂಗಳೂರು, ಜೂನ್ 22: ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನದ ಬಗ್ಗೆ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕರಿಂದ ಆಣೆ ಪ್ರಮಾಣ ವಿಚಾರ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ರಾಮನ ಹೆಸರಲ್ಲೇ ಲೂಟಿ ಮಾಡುವ ಬಿಜೆಪಿಯವರು ಮಂಜುನಾಥಸ್ವಾಮಿ ಹೆಸರಿನಲ್ಲಿ ಸತ್ಯ ಹೇಳ್ತಾರಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಅವರ ಪಕ್ಷವನ್ನು ನೋಡಿಕೊಳ್ಳಲು ಹೇಳಿ. ಬಿಜೆಪಿಯಲ್ಲಿ ಶಿಸ್ತೇ ಇಲ್ಲ, ಅದಕ್ಕೆ ಅಡ್ಡ ಮತದಾನ ಮಾಡಿದ್ದು. ಕಾಂಗ್ರೆಸ್ 100 ಭಾಗವಾದ್ರೂ ಆಗಲಿ, ಅವರಿಗೇನು ಸಮಸ್ಯೆ? ಬಿಜೆಪಿ ಅಧ್ಯಕ್ಷರು ಮಂಜುನಾಥಸ್ವಾಮಿ ಬಳಿ ಹೋಗೋಣ ಅಂತಿದ್ದಾರೆ. ಬೇರೆಯವರು ಬೇಡ ಅಂತಿದ್ದಾರೆ, ಇವರು ಎಷ್ಟು ಭಾಗ ಆಗಿದ್ದಾರೆ? ಎಂದು ಕೇಳಿವ ಮೂಲಕ ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

