Karnataka Assembly Polls: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಚಿಂತಾಮಣಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ

Karnataka Assembly Polls: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಚಿಂತಾಮಣಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್ ಶೋ

ಅರುಣ್​ ಕುಮಾರ್​ ಬೆಳ್ಳಿ
|

Updated on: May 02, 2023 | 6:36 PM

ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೂ ಸಿಗದ ಜನಮನ್ನಣೆ ಪ್ರಿಯಾಂಕಾ ಅವರಿಗೆ ಸಿಗುತ್ತಿದೆಯೆಂದರೆ ಉತ್ಪ್ರೇಕ್ಷೆ ಎನಿಸದು.

ಚಿಕ್ಕಬಳ್ಳಾಪುರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರ ಜನಪ್ರಿಯತೆ ಕಂಡು ಅವರ ಸಹೋದರ ರಾಹುಲ್ ಗಾಂಧಿಗೂ (Rahul Gandhi) ಆಶ್ಚರ್ಯವಾಗಿರಬಹುದು. ಅವರು ಹೋದೆಡೆಯೆಲ್ಲ ಜನ ಇರುವೆಗಳಂತೆ ಮುಕ್ಕುರುತ್ತಿದ್ದಾರೆ. ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೂ ಸಿಗದ ಜನಮನ್ನಣೆ ಅವರಿಗೆ ಸಿಗುತ್ತಿದೆಯೆಂದರೆ ಉತ್ಪ್ರೇಕ್ಷೆ ಎನಿಸದು. ಪ್ರಿಯಾಂಕಾ ಇಂದು ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಡಾ ಎಮ್ ಸಿ ಸುಧಾಕರ್ (Dr MC Sudhakar) ಅವರಪರ ಮತ ಯಾಚಿಸಲು ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ಅವರೊಂದಿಗೆ ಕರ್ನಾಟಕದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲ ಕೂಡ ಚಾಪರ್ ನಿಂದ ಇಳಿಯುವುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ