ಪ್ರಿಯಾಂಕಾ ಉಪೇಂದ್ರ ಐಫೋನ್ ಬಳಸಿದರೂ ಹ್ಯಾಕ್ ಆಗೋದು ತಪ್ಪಲಿಲ್ಲ: ಕಾರಣ ಏನು?
ಹ್ಯಾಕ್ ಆಗಬಾರದು ಎಂಬ ಉದ್ದೇಶದಿಂದಲೇ ಬಹುತೇಕರು ಐಫೋನ್ ಬಳಕೆ ಮಾಡುತ್ತಾರೆ. ಐಫೋನ್ ಖರೀದಿಸುವವರು ನೀಡುವ ಕಾರಣಗಳಲ್ಲಿ ಭದ್ರತೆ ಕೂಡ ಪ್ರಮುಖದ್ದಾಗಿರುತ್ತದೆ. ಆದರೆ ನಟಿ ಪ್ರಿಯಾಂಕಾ ಉಪೇಂದ್ರ ಐಫೋನ್ ಬಳಸುತ್ತಿದ್ದರೂ ಸಹ ಹ್ಯಾಕ್ ಆಗಿದೆ. ಆ ಕುರಿತು ಅವರು ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ವಿಡಿಯೋ ಇಲ್ಲಿದೆ..
ಹ್ಯಾಕ್ ಆಗಬಾರದು ಎಂಬ ಕಾರಣದಿಂದಲೇ ಅನೇಕರು ಐಫೋನ್ (iPhone) ಬಳಕೆ ಮಾಡುತ್ತಾರೆ. ಐಫೋನ್ ಖರೀದಿಸುವವರು ನೀಡುವ ಕಾರಣಗಳಲ್ಲಿ ಭದ್ರತೆ ಕೂಡ ಪ್ರಮುಖದ್ದಾಗಿರುತ್ತದೆ. ಆದರೆ ನಟಿ ಪ್ರಿಯಾಂಕಾ ಉಪೇಂದ್ರ ಅವರು ಐಫೋನ್ ಬಳಸುತ್ತಿದ್ದರೂ ಕೂಡ ಹ್ಯಾಕ್ (Hack) ಆಗಿದೆ. ಆ ಕುರಿತು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನ್ನದು ಐಫೋನ್ 14 ಪ್ರೋ ಮ್ಯಾಕ್ಸ್. ಆದರೆ ನನ್ನದೇ ತಪ್ಪಾಗಿರಬಹುದು. ನಾನು ಆ ನಂಬರ್ ಡಬಲ್ ಮಾಡಬಾರದಿತ್ತು. ಅದರಿಂದ ಕಾಲ್ ಫಾರ್ವರ್ಡ್ ಆಯಿತು. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಕೋಡ್ ಬಂದರೆ ದಯವಿಟ್ಟು ಒತ್ತಬೇಡಿ’ ಎಂದು ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಹೇಳಿದ್ದಾರೆ. ಸೈಬರ್ ವಂಚಕರಿಂದಾಗಿ ಪ್ರಿಯಾಂಕಾ ಉಪೇಂದ್ರ ಅವರ ಆಪ್ತರು ಹಣ ಕಳೆದುಕೊಳ್ಳುವಂತಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

