‘ಬೆಳೆಯಲು ಆ ನಟಿಗೆ ಕನ್ನಡ ಬೇಕಿತ್ತು; ಈಗ ಕನ್ನಡದಲ್ಲಿ ಡಬ್ ಮಾಡೋಕೆ ಟೈಂ ಇಲ್ಲ’: ವಿಶ್ವನಾಥ್ ಜಿ.ಪಿ. ಆಕ್ರೋಶ
Rashmika Mandanna: ತೆಲುಗಿನ ‘ಪುಷ್ಪ’ ಚಿತ್ರ ಕನ್ನಡಕ್ಕೆ ಡಬ್ ಆಗಿ ತೆರೆಕಂಡಿತ್ತು. ಆದರೆ ಆ ಸಿನಿಮಾದ ಕನ್ನಡ ವರ್ಷನ್ಗೆ ಡಬ್ ಮಾಡಲು ಸಮಯ ಇರಲಿಲ್ಲ ಎಂದು ರಶ್ಮಿಕಾ ಹೇಳಿದ್ದರು.
ಕನ್ನಡ ಪರ ಹೋರಾಟಗಾರರು ಸ್ಯಾಂಡಲ್ವುಡ್ ಮಂದಿ ವಿರುದ್ಧ ಗರಂ ಆಗಿದ್ದಾರೆ. ಕರ್ನಾಟಕದಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಡಿ.31ರಂದು ರಾಜ್ಯಾದ್ಯಂತ ಬಂದ್ (Karnataka Bandh) ಮಾಡಲು ನಿರ್ಧರಿಸಲಾಗಿದೆ. ಆದರೆ ಈ ಬಂದ್ಗೆ ಕನ್ನಡ ಚಿತ್ರರಂಗದಿಂದ ಕೇವಲ ನೈತಿಕ ಬೆಂಬಲ ನೀಡಲಾಗುವುದು ಎಂದು ವಾಣಿಜ್ಯ ಮಂಡಳಿ ತಿಳಿಸಿದೆ. ನೈತಿಕ ಬೆಂಬಲ ಬೇಡ, ಬಾಹ್ಯ ಬೆಂಬಲವೇ ಬೇಕು ಎಂದು ಕನ್ನಡಪರ ಹೋರಾಟಗಾರರು (Pro Kannada activists) ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾತನಾಡಿದ ಕನ್ನಡಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವಿಶ್ವನಾಥ್ ಜಿ.ಪಿ. ಅವರು ರಶ್ಮಿಕಾ ಮಂದಣ್ಣ (Rashmika Mandanna) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾವ ಪರಿಸ್ಥಿತಿ ಬಂದಿದೆ ಎಂದರೆ, ಒಬ್ಬ ನಟಿಗೆ ಬೆಳೆಯೋಕೆ ಕನ್ನಡ ಬೇಕಿತ್ತು. ಆದರೆ ಇಂದು ಕನ್ನಡದಲ್ಲಿ ಡಬ್ ಮಾಡೋಕೆ ಇವರಿಗೆ ಸಮಯ ಇಲ್ವ ಅಂತ ಹೇಳ್ತಾರೆ’ ಎಂದಿದ್ದಾರೆ ವಿಶ್ವನಾಥ್. ತೆಲುಗಿನ ‘ಪುಷ್ಪ’ ಚಿತ್ರ (Pushpa Movie) ಕನ್ನಡಕ್ಕೆ ಡಬ್ ಆಗಿ ತೆರೆಕಂಡಿತ್ತು. ಆದರೆ ಆ ಸಿನಿಮಾದ ಕನ್ನಡ ವರ್ಷನ್ಗೆ ಡಬ್ ಮಾಡಲು ಸಮಯ ಇರಲಿಲ್ಲ ಎಂದು ರಶ್ಮಿಕಾ ಹೇಳಿದ್ದರು.
ಇದನ್ನೂ ಓದಿ:
ರಶ್ಮಿಕಾ ಮಂದಣ್ಣ ಖುಷಿಗೆ ಸಿಕ್ತು ಇನ್ನೊಂದು ಕಾರಣ; ‘ಕಿರಿಕ್ ಬ್ಯೂಟಿ’ಯನ್ನು ಹಿಂಬಾಲಿಸ್ತಾರೆ 2.5 ಕೋಟಿ ಜನ
ಭಕ್ತಿಗೀತೆಗೆ ಅವಮಾನ ಮಾಡಿದ ದೇವಿಶ್ರೀ ಪ್ರಸಾದ್; ‘ಪುಷ್ಪ’ ಸಂಗೀತ ನಿರ್ದೇಶಕನ ಮೇಲೆ ಬಿತ್ತು ಕೇಸ್