‘ಕಾಟೇರ’ ಕಲೆಕ್ಷನ್ ಬಗ್ಗೆ ಕೇಳಿದ್ದಕ್ಕೆ ನಿರ್ಮಾಪಕ ರಾಕ್‌ಲೈನ್ ನೀಡಿದ್ರು ಡಿಫರೆಂಟ್ ಉತ್ತರ
ರಾಜ್ಯಾದ್ಯಂತ ಕಾಟೇರ ಸಿನಿಮಾ ಧೂಳೆಬ್ಬಿಸುತ್ತಿದೆ. ಮೂರು ದಿನಕ್ಕೆ ಈ ಚಿತ್ರ 58 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಆ ಕುರಿತ ಪ್ರಶ್ನೆಗೆ ರಾಕ್‌ಲೈನ್ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಅಭಿಮಾನಿಗಳು ‘ಕಾಟೇರ’ (Kaatera) ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಅದೇ ಖುಷಿಯಲ್ಲಿ ‘ಕಾಟೇರ’ ಚಿತ್ರತಂಡದವರು ಸಕ್ಸಸ್ ಮೀಟ್ ಮಾಡಿದ್ದಾರೆ. ಈ ವೇಳೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ (Rockline Venkatesh) ಅವರಿಗೆ ‘ಕಾಟೇರ’ ಚಿತ್ರದ ಕಲೆಕ್ಷನ್ (Kaatera Movie collection) ಬಗ್ಗೆ ಕೇಳಲಾಯಿತು. ‘ನನ್ನ ಸಿನಿಮಾಗಳ ಬಜೆಟ್, ಲಾಭ, ನಷ್ಟದ ಬಗ್ಗೆ ನಾನು ಯಾರೊಂದಿಗೂ ಮಾತಾಡಲ್ಲ. ‘ಕಾಟೇರ’ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಅಂತ ನೀವೇ ಬರೆಯುತ್ತಿದ್ದೀರಿ. ಹಾಗೇ ಆಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡಿಕೊಂಡು ಸುಮ್ಮನೆ ಇದ್ದೇನೆ. ಚೆನ್ನಾಗಿ ಕಲೆಕ್ಷನ್ ಆಗುತ್ತಿದೆ. ನಾನು ಲೆಕ್ಕ ನೋಡೋಕೆ ಹೋಗಿಲ್ಲ. ಅದನ್ನು ಕೊನೆಯಲ್ಲಿ ಮಾಡ್ತೀನಿ. ಆಮೇಲೆ ಹೇಳ್ತೀನಿ’ ಎಂದು ರಾಕ್‌ಲೈನ್ ವೆಂಕಟೇಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

