ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಆಟೋರಿಕ್ಷಾ ಚಾಲಕನೊಬ್ಬ ಪ್ರತಿಭಟನೆಕಾರರಿಂದ ತಪ್ಪಿಸಿಕೊಂಡಿದ್ದೇ ಪವಾಡ
ಆಟೋರಿಕ್ಷಾ ಚಾಲಕ ಮತ್ತು ಪ್ರತಿಭಟನಾಕಾರ ನಡುವೆ ಒಬ್ಬ ಟ್ರಾಫಿಕ್ ಪೊಲೀಸ್ ಕಾಣಿಸುತ್ತಾರೆ, ಆದರೆ ಅವರು ಮೂಕ ಪ್ರೇಕ್ಷಕ ಮಾತ್ರ. ಒಂದು ಪಕ್ಷ ಆಟೋರಿಕ್ಷಾದವನು ಪ್ರತಿಭಟನೆಕಾರರ ಕೈಗೆ ಸಿಕ್ಕಿದ್ದರೂ ಪೊಲೀಸ್ ಏನೂ ಮಾಡುತ್ತಿರಲಿಲ್ಲ. ಪ್ರತಿಭಟನೆಕಾರರು ನಂತರ ತಮ್ಮ ಬಲಭಾಗಕ್ಕೆ ತಿರುಗಿ ಅಲ್ಲಿ ಓಪನ್ ಇದ್ದ ಕೆಲವು ಅಂಗಡಿ ಮುಂಗಟ್ಟು ಮತ್ತು ಒಂದು ಲಾಡ್ಜ್ ಅನ್ನು ಮುಚ್ಚಿಸುತ್ತಾರೆ.
ಹುಬ್ಬಳ್ಳಿ: ದಲಿತಪರ ಮತ್ತು ವಿವಿಧ ಸಂಘಟನೆಗಳು ಇಂದು ಹುಬ್ಳಳ್ಳಿ-ಧಾರವಾಡ ಅವಳಿ ನಗರಗಳ ಬಂದ್ ಗೆ ಕರೆ ನೀಡಿವೆ. ಸಿಟಿ ಬಸ್ ಮತ್ತು ಆಟೋರಿಕ್ಷಾಗಳು ರಸ್ತೆಗಳಲ್ಲಿ ಕಾಣುತ್ತಿಲ್ಲ. ಪೊಲೀಸ್ ಕಮೀಶನರ್ ಹೇಳುವ ಪ್ರಕಾರ ಶಾಲ ಕಾಲೇಜುಗಳು ಸಹ ನಡೆಯುತ್ತಿಲ್ಲ. ಹುಬ್ಬಳ್ಳಿ ನಗರದ ಪ್ರದೇಶವೊಂದರಲ್ಲಿ ಆಟೋರಿಕ್ಷಾವೊಂದು ಸವಾರಿಗಳನ್ನು ಹೇರಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಪ್ರತಿಭಟನೆಕಾರು ‘ಹೇ ನಿಲ್ಸು’ ಅಂತ ವಾಹನದ ಕಡೆ ಓಡುತ್ತಾರೆ. ಆದರೆ, ಆಟೋರಿಕ್ಷಾ ಚಾಲಕ ಎದ್ನೋ ಬಿದ್ನೋ ಅಂತ ತನ್ನ ವಾಹನವನ್ನು ಬೇರೊಂದು ದಿಕ್ಕಿಗೆ ತಿರುಗಿಸಿ ಪರಾರಿಯಾಗುತ್ತಾನೆ. ಅದರ ಹಿಂದೆ ಓಡಲಾಗದ ಪ್ರತಿಭಟನೆಕಾರರು ವಾಪಸ್ಸು ಬರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪ್ರತಿಭಟನೆಕಾರರಿಗೆ ಎಚ್ಚರಿಸಲಾಗಿದೆ: ಶಶಿಕುಮಾರ್, ಪೊಲೀಸ್ ಕಮೀಶನರ್