ವಿಜಯಪುರದಲ್ಲಿ ಕಾರು ಚಾಲಕನ ಮೇಲೆ ಟ್ರಾಫಿಕ್ PSI ಹಲ್ಲೆ; ವಿಡಿಯೋ ವೈರಲ್​

Edited By:

Updated on: Aug 15, 2024 | 10:02 PM

ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ಪ್ರವೇಶ ದ್ವಾರದ ಬಳಿ ನಡೆದಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಪಿಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆಗಿದೆ. ಕಾರ್ ಚಾಲಕನಿಗೆ ಪಿಎಸ್ಐ ಗೂಸಾ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವಿಜಯಪುರ, ಆ.15: ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾರು ಚಾಲಕನ ಮೇಲೆ ಹಲ್ಲೆ ಮಾಡಿದ ಘಟನೆ ವಿಜಯಪುರ (Vijayapura) ನಗರದ ಬೇಗಂ ತಲಾಬ್ ಪ್ರವೇಶ ದ್ವಾರದ ಬಳಿ ನಡೆದಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಪಿಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆಗಿದೆ. ಹಲ್ಲೆಗೊಳಗಾದ ಕಾರು ಚಾಲಕನ ಹೆಸರು ತಿಳಿದು ಬಂದಿಲ್ಲ. ಕಾರು ಚಾಲಕನಿಗೆ ಅವಾಚ್ಯ ಶಬ್ಧದಿಂದ ನಿಂದಿಸಿ ಪಿಎಸ್ಐ ಹಲ್ಲೆ ನಡೆಸಿದ್ದಾರೆ. ಚಾಲಕನಿಗೆ ಸಿನಿಮಾ ಸ್ಡೈಲ್​ನಲ್ಲಿ ಪಂಚ್ ಮಾಡಿ ಗೂಂಡಾ ವರ್ತನೆ ತೋರಿಸಿದ್ದಾರೆ. ಗೂಂಡಾಗಿರಿ ಯಾಕೆ ಮಾಡ್ತಿರಾ? ಎಂದು ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಪಿಎಸ್ಐ ಗೂಸಾ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ