AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಥ ಬೌಲಿಂಗ್​ಯ್ಯ ನಿಂದು... ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ

ಎಂಥ ಬೌಲಿಂಗ್​ಯ್ಯ ನಿಂದು… ಬೌಲರ್-ಬ್ಯಾಟರ್​ ನಡುವೆ ಮಾತಿನ ಚಕಮಕಿ

ಝಾಹಿರ್ ಯೂಸುಫ್
|

Updated on: Apr 12, 2026 | 2:00 PM

Share

ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಉಸ್ಮಾನ್ ತಾರಿಖ್ ಕೇವಲ 23 ರನ್ ನೀಡಿ 2 ವಿಕೆಟ್​ ಕಬಳಿಸಿದರು. ಪರಿಣಾಮ ರಾವಲ್ಪಿಂಡಿಸ್ ತಂಡವು 17.3 ಓವರ್​ಗಳಲ್ಲಿ 121 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ಈ ಪಂದ್ಯವನ್ನು 61 ರನ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ.

ಪಾಕಿಸ್ತಾನ ಸೂಪರ್ ಲೀಗ್ (PSL) 2026ರ ಸೀಸನ್ ಕೇವಲ ಸಿಕ್ಸರ್-ಬೌಂಡರಿಗಳಿಗಷ್ಟೇ ಅಲ್ಲದೆ, ವಿಚಿತ್ರ ಕಾರಣಗಳಿಗೂ ಸುದ್ದಿಯಾಗುತ್ತಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ರಾವಲ್ಪಿಂಡಿಸ್ ನಡುವಿನ ಪಂದ್ಯದಲ್ಲಿ ನ್ಯೂಝಿಲೆಂಡ್‌ನ ಅನುಭವಿ ಆಟಗಾರ ಡೇರಿಲ್ ಮಿಚೆಲ್ ಮತ್ತು ಮಿಸ್ಟರಿ ಸ್ಪಿನ್ನರ್ ಉಸ್ಮಾನ್ ತಾರಿಖ್ ನಡುವೆ ನಡೆದ ಹಗ್ಗಜಗ್ಗಾಟ ಈಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡವು 20 ಓವರ್​ಗಳಲ್ಲಿ 182 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾವಲ್ಪಿಂಡಿಸ್ ತಂಡವನ್ನು ಕಾಡಿದ್ದು ವಿಚಿತ್ರ ಶೈಲಿಯ ಸ್ಪಿನ್ನರ್ ಉಸ್ಮಾನ್ ತಾರಿಖ್.

ಪಂದ್ಯದ 9ನೇ ಓವರ್​ನಲ್ಲಿ ಉಸ್ಮಾನ್ ತಾರಿಖ್ ಚೆಂಡೆಸೆಯುವ ಮೂಲಕ ಪಾಝ್ ತೆಗೆದುಕೊಂಡರು. ಇತ್ತ ವಿಳಂಬ ಮಾಡಿ ಚೆಂಡೆಸೆಯುತ್ತಿರುವುದರಿಂದ ಡೇರಿಲ್ ಮಿಚೆಲ್ ಅವರ ಏಕಾಗ್ರತೆ ಕದಡಿತು.

ಇದರಿಂದಾಗಿ ಮಿಚೆಲ್ ಸತತ ಎರಡು ಬಾರಿ ಕ್ರೀಸ್‌ನಿಂದ ಪಕ್ಕಕ್ಕೆ ಸರಿಯುವ ಮೂಲಕ ಬೌಲರ್‌ನ ಲಯವನ್ನು ತಪ್ಪಿಸಿದರು. ಇದರಿಂದ ಕೆರಳಿದ ತಾರಿಖ್ ಮತ್ತು ಮಿಚೆಲ್ ನಡುವೆ ಮಾತಿನ ಚಕಮಕಿ ನಡೆಯಿತು.

ಮಿಚೆಲ್ ಅವರ ಈ ವರ್ತನೆಯಿಂದ ಪಂದ್ಯ ಕೆಲಕಾಲ ಸ್ಥಗಿತಗೊಂಡಿತು. ಅಂಪೈರ್‌ಗಳಾದ ಅಹ್ಸಾನ್ ರಾಝ ಮತ್ತು ಕ್ರಿಸ್ ಬ್ರೌನ್ ಅವರು ಮಿಚೆಲ್ ಜೊತೆ ಚರ್ಚೆ ನಡೆಸಿದರು. ಮಿಚೆಲ್ ವಾದವೇನೆಂದರೆ, “ಬೌಲರ್ ಉದ್ದೇಶಪೂರ್ವಕವಾಗಿ ತಡಮಾಡಿ ಬ್ಯಾಟರ್‌ನ ಟೈಮಿಂಗ್ ಹಾಳು ಮಾಡುತ್ತಿದ್ದಾರೆ” ಎಂಬುದು.

ಕುತೂಹಲಕಾರಿ ವಿಷಯವೆಂದರೆ, ಇತ್ತೀಚೆಗಷ್ಟೇ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಅವರು ಇಂತಹ ಬೌಲರ್‌ಗಳ ವಿರುದ್ಧ ‘ಬ್ಯಾಟರ್‌ಗಳು ಕ್ರೀಸ್ ಬಿಟ್ಟು ಪಕ್ಕಕ್ಕೆ ಸರಿಯುವ ಮೂಲಕ ಪ್ರತಿಭಟಿಸಬೇಕು’ ಎಂದು ಸಲಹೆ ನೀಡಿದ್ದರು. ಮಿಚೆಲ್ ಅದೇ ತಂತ್ರವನ್ನು ಇಲ್ಲಿ ಅನುಸರಿಸಿದಂತೆ ಕಂಡಿತು.

ಆದರೆ ಅಂತಿಮವಾಗಿ ಗೆಲುವು ಉಸ್ಮಾನ್ ತಾರಿಖ್ ಅವರದ್ದಾಯಿತು. ಮಿಚೆಲ್ ಅವರ ವಿರೋಧದ ನಡುವೆಯೂ ಬೌಲಿಂಗ್ ಮುಂದುವರಿಸಿದ ತಾರಿಖ್, ಅಂತಿಮವಾಗಿ ಮಿಚೆಲ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಉಸ್ಮಾನ್ ತಾರಿಖ್ ಕೇವಲ 23 ರನ್ ನೀಡಿ 2 ವಿಕೆಟ್​ ಕಬಳಿಸಿದರು. ಪರಿಣಾಮ ರಾವಲ್ಪಿಂಡಿಸ್ ತಂಡವು 17.3 ಓವರ್​ಗಳಲ್ಲಿ 121 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ ಕ್ವೆಟ್ಟಾ ಗ್ಲಾಡಿಯೇಟರ್ಸ್ ಈ ಪಂದ್ಯವನ್ನು 61 ರನ್‌ಗಳ ಭರ್ಜರಿ ಅಂತರದಿಂದ ಗೆದ್ದುಕೊಂಡಿದೆ.

Follow Us