ಸಂಬಂಧಗಳನ್ನು ಹಾಳುಮಾಡುವ ಕೋಪವನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಅಂತ ಡಾ ಸೌಜನ್ಯ ವಶಿಷ್ಠ ವಿವರಿಸುತ್ತಾರೆ
ಪತಿ ಪತ್ನಿಯರ ನಡುವೆ ಜಗಳ ಕಡಿಮೆಯಾಗಲು ಕೋಪ ತಹಬದಿಗೆ ಬರಲು ಸಾರೀ ಅನ್ನುವ ಶಬ್ದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುವ ಡಾ ಸೌಜನ್ಯ ಅವರು ತಮಗೆ ಕೋಪ ಬಂದಾಗ ಯಾವುದಾದರೂ ಕಾಮಿಡಿ ಶೋ ನೋಡಿ ಅದನ್ನು ಕಡಿಮೆ ಮಾಡಿಕೊಳ್ಳುತ್ತಾರಂತೆ.
ಮನಶಾಸ್ತ್ರಜ್ಞೆ ಡಾ ಸೌಜನ್ಯ ವಶಿಷ್ಠ ಅವರು ಇವತ್ತಿನ ಸಂಚಿಕೆಯಲ್ಲಿ ಕೋಪವನ್ನು ನಿರ್ವಹಿಸುವುದು (anger management) ಹೇಗೆ ಅನ್ನವುದನ್ನು ವಿವರಿಸಿದ್ದಾರೆ. ಕೋಪ ಎಲ್ಲರಿಗೂ ಬರುತ್ತದೆ ಅದೇನೂ ದೊಡ್ಟ ವಿಷಯವಲ್ಲ ಅದರೆ ಅದನ್ನು ನಿಯಂತ್ರಿಸುವುದರಲ್ಲಿ ದೊಡ್ಡತನ ಅಡಗಿದೆ ಎಂದು ಅವರು ಹೆಳುತ್ತಾರೆ. ಆಗಾಗ ಕೋಪ ಬರೋದು ಅಥವಾ ಕೋಪ ಮಾಡಿಕೊಳ್ಳೋದು ಒಳ್ಳೆಯದು ಅದರೆ, ನಮ್ಮ ಕೋಪ ಬೇರೆಯವರಿಗೆ ಹಾನಿಯನ್ನುಂಟು ಮಾಡಬಾರದು. ಕೆಲವರಿಗೆ ವಿಪರೀತ ಕೋಪ ಬರುತ್ತೆ, ಅದನ್ನು ನಿಯಂತ್ರಿಸಲಾಗದೆ ಅನಾಹುತಗಳನ್ನು ಮಾಡಿಬಿಡುತ್ತಾರೆ. ಕೋಪ ಬಂದಾಗ ಕೊಲೆ ಮಾಡಿದವರ ಕತೆಗಳನ್ನು ಸಹ ನಾವು ಕೇಳಿದ್ದೇವೆ. ಹಾಗಾಗಿ ಅದನ್ನು ನಿಯಂತ್ರಿಸುವುದು ಬಹಳ ಮುಖ್ಯ.
ಗಂಡ ಹೆಂಡತಿಯ ನಡುವೆ ಜಗಳಗಳು ಆಗುವುದು ಸರ್ವೇ ಸಾಮಾನ್ಯ. ಇಬ್ಬರೂ ಕೋಪಿಷ್ಠರಾದರೆ, ಮೊದಮೊದಲು ನೆರೆಹೊರೆಯವರಿಗೆ ಪುಕ್ಕಟೆ ಮನರಂಜನೆ ಸಿಗುತ್ತದೆ ಅದರೆ ಕ್ರಮೇಣ ಅವರಿಗೂ ರೋಸಿ ಕೋಪ ಬರಲಾರಂಭಿಸುತ್ತದೆ. ಪತಿ ಪತ್ನಿಯರ ನಡುವೆ ಜಗಳ ಕಡಿಮೆಯಾಗಲು ಕೋಪ ತಹಬದಿಗೆ ಬರಲು ಸಾರೀ ಅನ್ನುವ ಶಬ್ದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುವ ಡಾ ಸೌಜನ್ಯ ಅವರು ತಮಗೆ ಕೋಪ ಬಂದಾಗ ಯಾವುದಾದರೂ ಕಾಮಿಡಿ ಶೋ ನೋಡಿ ಅದನ್ನು ಕಡಿಮೆ ಮಾಡಿಕೊಳ್ಳುತ್ತಾರಂತೆ.
ಕೋಪವನ್ನು ನಿಯಂತ್ರಿಸದೆ ಹೋದರೆ ಅದು ಸಂಬಂಧಗಳನ್ನು ಹಾಳು ಮಾಡುತ್ತದೆ. ಹಾಗಾದರೆ ಅದನ್ನು ನಿಯಂತ್ರಿಸುವುದು ಹೇಗೆ? ಕೋಪ ಬಂದಾಗ ನಾವು ಸಾಮಾನ್ಯವಾಗಿ ಬೈದಾಡುತ್ತೇವೆ ಕಿರುಚಾಡುತ್ತೇವೆ. ನಾವು ಹತ್ತು ಸಲ ಬೈಯುವುದನ್ನು ಎರಡು ಸಲಕ್ಕೆ ನಿಲ್ಲಿಸುವ ಪ್ರಯತ್ನ ಮಾಡಬೇಕು. ನಾವು ನಿಂತಿರುವ ಇಲ್ಲವೇ ಕೂತಿರುವ ಜಾಗವನ್ನು ಬಿಟ್ಟು ಬೇರೆ ಕಡೆ ಹೋಗಬೇಕು. ನಮ್ಮ ಗಮನವನ್ನು ಬೇರೆ ಕಡೆ ಹರಿಸಬೇಕು ಎಂದು ಸೌಜನ್ಯ ಹೇಳುತ್ತಾರೆ.
ಕೋಪ ಬಂದಾಗ ಲಘುವಾದ ವ್ಯಾಯಾಮ, ಪ್ರಾಣಯಾಮ, ಧ್ಯಾನ ಇಲ್ಲವೇ ಯೋಗ ಮಾಡುವುದು ಉತ್ತಮ ಅಭ್ಯಾಸ ಎಂದು ಡಾ ಸೌಜನ್ಯ ಹೇಳುತ್ತಾರೆ. ಹಾಗೆಯೇ, ನಮ್ಮ ಎಮೋಶನ್ಗಳನ್ನು ಬರೆದು ಸುಟ್ಟು ಹಾಕುವುದರಿಂದಲೂ ಕೋಪ ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಾರೆ.