ವ್ಹೀಲಿಂಗ್ ಮಾಡ್ತಿದ್ದ ಪುಂಡರ ಬೈಕ್ಗಳನ್ನು ಫ್ಲೈಓವರ್ನಿಂದ ಎಸೆದ ಜನ: ವಿಡಿಯೋ ನೋಡಿ
ವ್ಹೀಲಿಂಗ್ ಮಾಡಬೇಡಿ ಅಂದರೆ ಕೇಳೋ ಮಾತೇ ಇಲ್ಲ. ರಸ್ತೆ ಮಧ್ಯೆ ವೀಲಿಂಗ್ ಮಾಡಿ ವಾಹನ ಸವಾರರನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದ ಪುಢಾರಿಗಳಿಗೆ ಸಾರ್ವಜನಿಕವಾಗಿ ತಕ್ಕ ಶಿಕ್ಷೆ ನೀಡಲಾಗಿದೆ.
ಬೆಂಗಳೂರು, (ಆಗಸ್ಟ್ 18): ನ್ಯಾಷನಲ್ ಹೈವೆಯಲ್ಲಿ ವೀಲಿಂಗ್ ಮಾಡ್ತಿದ್ದ ಪುಂಡನ ಸ್ಕೂಟರ್ ಅನ್ನು ಫ್ಲೈಓವರ್ ಮೇಲಿಂದ ಸಾರ್ವಜನಿಕರು ಎತ್ತಿ ಬೀಸಾಡಿದ್ದಾರೆ. ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಡಿಯೋ ಸ್ಕೂಟರ್ಗಳನ್ನ ಎಸೆಯಲಾಗಿದೆ. ಎರಡು ಸ್ಕೂಟರ್ಗಳನ್ನು ಎಸೆಯಲಾಗಿದೆ. ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸೋ ರೀತಿ ವೀಲಿಂಗ್ ಮಾಡ್ತಿದ್ರು. ಅಷ್ಟೇ ಅಲ್ಲದೇ ಒಂದು ವಾಹನಕ್ಕೆ ಡಿಕ್ಕಿ ಕೂಡ ಹೊಡೆದಿದ್ದಾರೆ. ಈ ವೇಳೆ ಬೈಕ್ ತಡೆದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಬೈಕ್ಗೆ ಒಂದು ಗತೀ ಕಾಣಿಸಿದ್ದಾರೆ. ಇನ್ನು ವ್ಹೀಲಿಂಗ್ ಮಾಡಿದ ಪುಂಡನ ಬೈಕ್ಅನ್ನು ಫ್ಲೈಓವರ್ ಮೇಲಿಂದ ಬಿಸಾಡಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಮೇಲ್ನೋಟಕ್ಕೆ ಜನ ಕಾನೂನು ಕೈಗೆತ್ತಿಕೊಂಡಂತೆ ಕಂಡರೂ ಈ ಪುಂಡರಿಗೆ ಇದೇ ರೀತಿ ಆಗಬೇಕು. ಆಗಲಾದರು ಬುದ್ಧಿ ಬರುತ್ತೆ ಅನಿಸುತ್ತೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.