ಚಿಕ್ಕಬಳ್ಳಾಪುರ: ನಂದಿ ಹಿಲ್ಸ್​ ಹೋಗುವ ಪ್ರವಾಸಿಗರಿಗೆ ನಿರಾಸೆ, ಕಿಮೀಗಟ್ಟಲೆ ಟ್ರಾಫಿಕ್​ ಜಾಮ್​

ಚಿಕ್ಕಬಳ್ಳಾಪುರ: ನಂದಿ ಹಿಲ್ಸ್​ ಹೋಗುವ ಪ್ರವಾಸಿಗರಿಗೆ ನಿರಾಸೆ, ಕಿಮೀಗಟ್ಟಲೆ ಟ್ರಾಫಿಕ್​ ಜಾಮ್​

ವಿವೇಕ ಬಿರಾದಾರ
|

Updated on: Aug 18, 2024 | 11:17 AM

ರವಿವಾರ ರಜೆ ಹಿನ್ನೆಲೆಯಲ್ಲಿ ಜಾಲಿಯಾಗಿ ನಂದಿಗಿರಿಧಾಮಕ್ಕೆ ಪ್ರವಾಸಿಗರು ಹೋಗುತ್ತಿದ್ದಾರೆ. ಆದರೆ ಪ್ರವಾಸಿಗರಿಗೆ ದಾರಿ ಮಧ್ಯೆ ನಿರಾಸೆ ಕಾದಿದೆ. ಬೆಟ್ಟದ ಮೇಲೆ ಹೋಗಲು ಆಗದೆ ಮತ್ತು ಬೆಟ್ಟದ ಮೇಲೆ ಹೋದವರು ಕೆಳಗೆ ಬರಲು ಆಗದೆ ಪರದಾಡಿದರು. ಇದಕ್ಕೆ ಕಾರಣವೇನು? ಈ ವಿಡಿಯೋ ನೋಡಿ.

ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಜನರು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಕಳೆದ 2-3 ದಿನಗಳಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ (Nandi Hills) ಸಾಕಷ್ಟು ಜನರು ತೆರಳುತ್ತಿದ್ದಾರೆ. ರವಿವಾರ ಬೆಳ್ಳಂ ಬೆಳಗ್ಗೆ ನಂದಿಗಿರಿಧಾಮಕ್ಕೆ ತೆರಳುತ್ತಿದ್ದ ಜನರಿಗೆ ನಿರಾಸೆಯಾಗಿದೆ. ಕಿಲೋಮೀಟರ್​ಗಟ್ಟಲೇ ಟ್ರಾಫಿಕ್​ ಜಾಮ್​​ನಲ್ಲಿ ವಾಹನ ಸವಾರರು ಪರದಾಡಿದರು. ಹೌದು, ನಂದಿಗಿರಿಧಾಮಕ್ಕೆ ತೆರಳುವ ರಸ್ತೆಯಲ್ಲಿ ಮರದ ಟೊಂಗೆ ಬಿದ್ದು ರಸ್ತೆ ಬಂದ್​ ಆಗಿದೆ. ಇದರಿಂದ ವಾಹನಗಳು ಬೆಟ್ಟದ ಮೇಲೆ ಹೋಗಲಾಗದೆ, ಕೆಳಗೆ ಬರಲಾಗದೆ ರಸ್ತೆಯಲ್ಲೇ ನಿಂತಿವೆ. ಇದರಿಂದ ಐದಾರು ಕಿಮೀ​ವರೆಗೆ ವಾಹನಗಳು ಸಾಲುಗಟ್ಟಿ ನಿಂತಿವೆ. ನಂದಿಗಿರಿಧಾಮದ ಮೇಲೆ ಹೋಗಲಾಗದೆ ಪ್ರವಾಸಿಗರು ಪರದಾಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ಪ್ರವಾಸಿಗರು ರಸ್ತೆಯಲ್ಲಿ ಕಾಯುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ