ಇಂದು (ಮಾರ್ಚ್ 17) ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನ. ಈ ವಿಶೇಷ ದಿನವನ್ನು ಫ್ಯಾನ್ಸ್ ಆಚರಿಸುತ್ತಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲ ಎಂಬ ನೋವು ಸದಾ ಇರುವಂಥದ್ದು. ಅವರ ಹೆಸರನ್ನು ಉಳಿಸುವಂತಹ ಕಾರ್ಯ ಆಗುತ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿ ಬಳಿ ಫ್ಯಾನ್ಸ್ ನೆರೆದಿದ್ದಾರೆ. ರಾಜ್ ಕುಟುಂಬ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಲಿದೆ. ಮಧ್ಯರಾತ್ರಿ ಫ್ಯಾನ್ಸ್ ಜೊತೆ ಸೇರಿ ರಾಘವೇಂದ್ರ ರಾಜ್ಕುಮಾರ್ ಕೇಕ್ ಕತ್ತರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ