Assembly Polls: ರೌಡಿಶೀಟರ್ ಬೆಂಗಳೂರಿನವನಾಗಲಿ ಅಥವಾ ಬೀದರ್, ಚುನಾವಣೆ ಮುಗಿಯುವವರೆಗೆ ಬಾಲ ಮುದುರಿಕೊಂಡು ಬಿದ್ದಿರಬೇಕು!

Arun Kumar Belly

|

Updated on:Mar 17, 2023 | 10:26 AM

ಬೀದರ್​​ನಲ್ಲಿ ಕೆಲವು ಮನೆಯಿಂದ ನಾಪತ್ತೆಯಾಗಿದ್ದರೆ ಮನೆಯಲ್ಲಿ ಸಿಕ್ಕವರಿಗೆ ಬಾಲ ಮುದುರಿಕೊಂಡು ಬಿದ್ದಿರುವಂತೆ ಪೊಲೀಸರು ಖಡಕ್ಕಾಗಿ ಎಚ್ಚರಿಸಿದ್ದಾರೆ. ಒಬ್ಬ ರೌಡಿಯ ಮನೆಯಲ್ಲಿ ಮತ್ತು ಬರಿಸುವ ಮಾತ್ರೆಗಳ ಸ್ಟ್ರಿಪ್ ಗಳು ಸಿಕ್ಕಿವೆ.

ಬೀದರ್: ವಿಧಾನಸನಭಾ ಚುನಾವಣೆ (Assembly polls) ಮುಗಿಯುವವರೆಗೆ ರೌಡಿಶೀಟರ್ ಗಳಿಗೆ (rowdy sheeters), ಪುಡಿರೌಡಿಗಳಿಗೆ ಉಳಿಗಾಲವಿದ್ದಂತಿಲ್ಲ. ರೌಡಿಗಳು ಬೆಂಗಳೂರಿನವರೇ ಆಗಿರಬಹದು ಇಲ್ಲವೇ ಬೀದರ್(Bidar)-ಅವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿ ಖಬರ್ ತೆಗೆದುಕೊಳ್ಳುತ್ತಿದ್ದಾರೆ. ಕಳೆದ ರಾತ್ರಿ ಬೀದರ್ ನಗರದಲ್ಲಿ ಪೊಲೀಸರು ಮನೆಗಳ ಮೇಲೆ ನಡೆಸಿದ ದಾಳಿಗಳಿಂದ ರೌಡಿಗಳು ತಲ್ಲಣಿಸಿದ್ದಾರೆ. ಕೆಲವರು ಮನೆಯಿಂದ ನಾಪತ್ತೆಯಾಗಿದ್ದರೆ ಮನೆಯಲ್ಲಿ ಸಿಕ್ಕವರಿಗೆ ಬಾಲ ಮುದುರಿಕೊಂಡು ಬಿದ್ದಿರುವಂತೆ ಪೊಲೀಸರು ಖಡಕ್ಕಾಗಿ ಎಚ್ಚರಿಸಿದ್ದಾರೆ. ಒಬ್ಬ ರೌಡಿಯ ಮನೆಯಲ್ಲಿ ಮತ್ತು ಬರಿಸುವ ಮಾತ್ರೆಗಳ ಸ್ಟ್ರಿಪ್ ಗಳು ಸಿಕ್ಕಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on

Click on your DTH Provider to Add TV9 Kannada