100 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ ಅಪ್ಪು ಫ್ಯಾನ್​; ಎಲ್ಲರಿಗೂ ಪ್ರೇರಣೆಯಾದ ಹುಬ್ಬಳಿ ಅಭಿಮಾನಿ

Edited By:

Updated on: Mar 17, 2022 | 3:53 PM

ತಮ್ಮ ಈ ಎಲ್ಲ ಕೆಲಸಕ್ಕೆ ಪುನೀತ್​ ಅವರೇ ಸ್ಫೂರ್ತಿ ಎಂದು ರಘು ಹೇಳಿದ್ದಾರೆ. ‘ಜೇಮ್ಸ್​’ ಸಿನಿಮಾದ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರಿಗೂ ಪ್ರೇರಣೆ ಆಗಿದ್ದರು. ಅವರ ಕೆಲವು ಅಭಿಮಾನಿಗಳು (Puneeth Rajkumar Fans) ಕೂಡ ಅದೇ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇಂದು (ಮಾ.17) ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ ‘ಜೇಮ್ಸ್​’ ಸಿನಿಮಾ (James Movie) ಬಿಡುಗಡೆ ಆಗಿದೆ. ಸೆಲೆಬ್ರೇಷನ್​ಗಾಗಿ ಖರ್ಚು ಮಾಡುವ ಹಣವನ್ನೇ ಸಾಮಾಜಿಕ ಕಳಕಳಿಗಾಗಿ ಬಳಸುವ ಮೂಲಕ ಎಲ್ಲರಿಗೂ ಮಾದರಿ ಆಗುವಂತಹ ಕೆಲಸ ಮಾಡಿದ್ದಾರೆ ಹುಬ್ಬಳಿಯ ಅಪ್ಪು ಅಭಿಮಾನಿ ರಘು ವದ್ದಿ. 100 ಜನರಿಗೆ ಅವರು ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಬಳಿಕ ಎಲ್ಲರಿಗೂ ಪುನೀತ್ ಭಾವಚಿತ್ರದ ಜೊತೆ ಒಂದೊಂದು ಸಸಿ ನೀಡಿದ್ದಾರೆ. ಮನೆಯಲ್ಲಿ ಅಪ್ಪು ಫೋಟೋ ಇಟ್ಟುಕೊಳ್ಳಬೇಕು ಮತ್ತು ಸಸಿ ನೆಡಬೇಕು ಎಂಬ ಕೋರಿಕೆಯನ್ನು ಅವರು ಎಲ್ಲರಲ್ಲೂ ಮಾಡಿಕೊಂಡಿದ್ದಾರೆ. ತಮ್ಮ ಈ ಎಲ್ಲ ಕೆಲಸಕ್ಕೆ ಪುನೀತ್​ ಅವರೇ ಸ್ಫೂರ್ತಿ ಎಂದು ರಘು ಹೇಳಿದ್ದಾರೆ. ‘ಜೇಮ್ಸ್​’ ಸಿನಿಮಾದ ಹಿನ್ನೆಲೆಯಲ್ಲಿ 100 ವೃದ್ಧರನ್ನು ಹುಬ್ಬಳಿಯ ‘ಅಪ್ಸರ’ ಚಿತ್ರಮಂದಿರಕ್ಕೆ ಕರೆಸಿ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ:

ಶಿರಸಿ ಮಾರಿಕಾಂಬೆ ರಥದ ಬಳಿ ತಲುಪಿತು ಅಪ್ಪು ಫೋಟೋ; ಜಾತ್ರೆಯಲ್ಲಿ ಅಭಿಮಾನ ಮೆರೆದ ಪುನೀತ್​ ಫ್ಯಾನ್ಸ್​

ಜಗ್ಗೇಶ್​ ಜನ್ಮದಿನ: ಪುನೀತ್​ ವಿಶ್​ ಮಾಡಿದ್ದ ಆ ವಿಡಿಯೋ ಮತ್ತೆ ವೈರಲ್​; ಭಾವುಕರಾದ ‘ನವರಸ ನಾಯಕ’