ಜಾತ್ರೆಯಲ್ಲೂ ಅಪ್ಪು ಅಭಿಮಾನದ ಹೊಳೆ; ‘ಮತ್ತೆ ಹುಟ್ಟಿ ಬನ್ನಿ’ ಎಂದು ವಿಶೇಷವಾಗಿ ಪ್ರಾರ್ಥಿಸಿದ ಫ್ಯಾನ್ಸ್
ಪ್ರತಿ ವಿಶೇಷ ಸಂದರ್ಭದಲ್ಲೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಕನ್ನಡ ಸಿನಿಪ್ರಿಯರು ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ. ಅಪ್ಪು ಅವರನ್ನು ಕಳೆದುಕೊಂಡು ಸ್ಯಾಂಡಲ್ವುಡ್ ಬಡವಾಗಿದೆ. ಅಭಿಮಾನಿಗಳು ಕೂಡ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ನಿಧನರಾಗಿ ಅನೇಕ ದಿನಗಳು ಕಳೆದಿವೆ. ಜನರು ಒಂದಿಲ್ಲೊಂದು ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಪ್ರತಿ ವಿಶೇಷ ಸಂದರ್ಭದಲ್ಲೂ ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು (Lingasugur) ತಾಲೂಕಿನ ಕಸಬಾ ಲಿಂಗಸಗೂರು ಜಾತ್ರೆಯ ರಥೋತ್ಸವ ನಡೆದಿದೆ. ಈ ವೇಳೆ ಅಭಿಮಾನಿಗಳು ಬಾಳೆ ಹಣ್ಣಿನ ಮೇಲೆ ‘ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಮತ್ತೆ ಹುಟ್ಟಿ ಬನ್ನಿ’ ಎಂದು ಬೆರೆದಿದ್ದಾರೆ. ಆ ಬಾಳೆ ಹಣ್ಣುಗಳನ್ನು ದೇವರಿಗೆ ಅರ್ಪಿಸುವ ಮೂಲಕ ಅಪ್ಪುಗಾಗಿ ಪ್ರಾರ್ಥಿಸಲಾಗಿದೆ. ಈ ವಿಡಿಯೋ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ:
ಪುನೀತ್ ರಾಜ್ಕುಮಾರ್ಗಾಗಿ ಫ್ಯಾನ್ಸ್ ನಿರ್ಮಿಸಿದ ಮಿನಿ ಸ್ಮಾರಕ; ಹೊಸೂರು ಗ್ರಾಮಸ್ಥರ ಅಭಿಮಾನದ ಕಾರ್ಯ
ಪುನೀತ್ ರಾಜ್ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್ ಕಾಗೇರಿ