ಪುನೀತ್ ರಾಜಕುಮಾರ್ ಅಗಲಿ 9 ತಿಂಗಳಾದರೂ ಅಭಿಮಾನಿಗಳ ವೇದನೆ ಕಡಿಮೆಯಾಗಿಲ್ಲ

ಪುನೀತ್ ರಾಜಕುಮಾರ್ ಅಗಲಿ 9 ತಿಂಗಳಾದರೂ ಅಭಿಮಾನಿಗಳ ವೇದನೆ ಕಡಿಮೆಯಾಗಿಲ್ಲ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2022 | 12:09 PM

ಪುನೀತ್ ಕುಟುಂಬ ಸದಸ್ಯರು ಇಂದು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಮಹಿಳಾ ಅಭಿಮಾನಿಯೊಬ್ಬರು ಅಗಲಿದ ನಟನನ್ನು ನೆನೆದು ಅತ್ತುಬಿಟ್ಟರು.

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ (Puneeth Rajkumar) ಅವರು ನಮ್ಮನ್ನಗಲಿ ಇಂದಿಗೆ ಒಂಭತ್ತು ತಿಂಗಳು ಕಳೆದವು. ಅವರ ಲಕ್ಷಾಂತರ ಅಭಿಮಾನಿಗಳಿಗೆ (Fnas) ಅಪ್ಪುನ ನೆನಪು ಮಾತ್ರ ಮಾಸದು. ಹಾಗೆ ನೋಡಿದರೆ ಪ್ರತಿದಿನ ನೂರಾರು ಜನ ಕಂಠೀರವ ಸ್ಟುಡಿಯೋಗೆ (Kanteerava Studio) ಹೋಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಪುನೀತ್ ಕುಟುಂಬ ಸದಸ್ಯರು ಇಂದು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಮಹಿಳಾ ಅಭಿಮಾನಿಯೊಬ್ಬರು ಅಗಲಿದ ನಟನನ್ನು ನೆನೆದು ಅತ್ತುಬಿಟ್ಟರು.