ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: ತನಿಖೆಗೆ ಆಗ್ರಹಿಸಿದ HD ರೇವಣ್ಣ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 03, 2024 | 5:35 PM

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆಡಿಎಸ್ ನಾಯಕ ಮಾಜಿ ಸಚಿವ ಹೆಚ್​ಡಿ ರೇವಣ್ಣ, ಹಾಸನದ ಇಂಡಸ್ಟ್ರಿಯಲ್ ಏರಿಯಾದಲ್ಲಿ ಪಾರ್ಕ್ ಗಾಗಿ ನಿವೇಶನ ಮೀಸಲಿಡಲಾಗಿತ್ತು. ಎರಡು ಎಕರೆ ಪಾರ್ಕ್ ಜಾಗ ಕನಿಷ್ಠ 25 ಕೋಟಿ ರೂ. ಬೆಲೆ ಬಾಳುತ್ತೆ. ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ಹಾಸನ, ಅಕ್ಟೋಬರ್​ 03: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಾಜಿ ಸಚಿವ ಹೆಚ್​ಡಿ ರೇವಣ್ಣ (HD Revanna) ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಶೆಡ್​​​ ನಿರ್ಮಾಣದ ಹಿಂದೆ ಯಾರಿದ್ದಾರೆ ಎಂದು ಎಸ್​​ಪಿ ಹೇಳಬೇಕು. ಹಾಸನ ಸಂಸದರು ಇದನ್ನೆಲ್ಲಾ ಮಾಡಿಸುತ್ತಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಹೆಚ್​.ಡಿ.ರೇವಣ್ಣ ವಾಗ್ದಾಳಿ ಮಾಡಿದ್ದಾರೆ. ಹಾಸನ ತಾಲೂಕಿನ ನಾಗತವಳ್ಳಿಯಲ್ಲಿರುವ ಎರಡು ಎಕರೆ ಭೂಮಿ ಪಾರ್ಕ್​ ಆಗಿಯೇ ಉಳಿಸಬೇಕು. ಕೈಗಾರಿಕೆ ಪ್ರದೇಶದಲ್ಲಿ ಪಾರ್ಕ್​ಗಾಗಿ ನಿವೇಶನ ಮೀಸಲಿಡಲಾಗಿತ್ತು. ಎರಡು ಎಕರೆ ಪಾರ್ಕ್ ಕನಿಷ್ಠ 25 ಕೋಟಿ ರೂ. ಬೆಲೆ ಬಾಳುತ್ತೆ. 2013ರಲ್ಲಿ ಕೆಲ ಅಧಿಕಾರಿಗಳು ಭೂಮಿಯನ್ನು ಮಂಜೂರು ಮಾಡಿದ್ದಾರೆ. ಈ ಜಾಗದಲ್ಲಿ ಕಾಮಗಾರಿ ನಡೆಸದಂತೆ ಕೆಐಎಡಿಬಿ ಆದೇಶ ಮಾಡಿದೆ. ಆ ಜಾಗದಲ್ಲಿ ದೇವಸ್ಥಾನ ಇತ್ತು, ಗಿಡಗಳನ್ನು ಬೆಳೆಸಲಾಗಿತ್ತು. 500 ಪೊಲೀಸರನ್ನು ಬಳಸಿ ಕಾಮಗಾರಿ ಮಾಡಿಸಲು ಪ್ರಯತ್ನ ನಡೆದಿದೆ. ಅಕ್ರಮ ಮಂಜೂರಾತಿ ಮಾಡಿದವರ ವಿರುದ್ಧ ಕ್ರಮಕ್ಕೆ ರೇವಣ್ಣ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on