ಇಬ್ರಾಹಿಂ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆಯೇ ಬೆಂಕಿ ಮೇಲೆ ಕುಳಿತ ಹಾಗೆ ಆಡಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 28, 2022 | 1:14 AM

‘ಏಯ್’ ಅಂತ ಯಾವುದೇ ಹಿರಿಯ, ಪ್ರಜ್ಞಾವಂತ ಮತ್ತು ರಾಷ್ಟ್ರೀಯ ಪಕ್ಷವೊಂದರ ನಾಯಕ ಮಾಧ್ಯಮದವರನ್ನು ಸಂಬೋಧಿಸಲಾರ. ಜನಪ್ರತಿನಿಧಿಗಳನ್ನು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದ ಕೆಲಸವಾಗಿದೆ. ವೈಯಕ್ತಿಕ ಪ್ರಶ್ನೆಗಳನ್ನೇನೂ ಮಾಧ್ಯಮದವರು ಕೇಳುವುದಿಲ್ಲ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೂ ಅಗಿರುವ ಸಿದ್ದರಾಮಯ್ಯ (Siddaramaiah) ಅವರು ಇತ್ತೀಚಿಗೆ ಸಾರ್ವಜನಿಕವಾಗಿ ತಮ್ಮ ಹುದ್ದೆಗಳ ಘನತೆ ಮತ್ತು ಗೌರವಕ್ಕೆ ತಕ್ಕನಾಗಿ ವರ್ತಿಸುತ್ತಿಲ್ಲ ಅನ್ನೋದು ಕನ್ನಡಿಗರಿಗೆ ಅನಿಸುತ್ತಿದೆ ಮಾರಾಯ್ರೇ. ಅವರಲ್ಲಿ ಮುಜುಗರ ಹುಟ್ಟುವ ಪ್ರಶ್ನೆಗಳನ್ನು ಮಾಧ್ಯಮದವರು (Media) ಕೇಳಿದರೆ, ಸಿಡಿಮಿಡಿಗೊಳ್ಳುವುದು, ಪತ್ರಕರ್ತರ ಮೇಲೆ ರೇಗುವುದು ಮಾಡುತ್ತಿದ್ದಾರೆ. ಗುರುವಾರ ಬೆಂಗಳೂರು ನಡೆದ ಘಟನೆಯನ್ನೇ ಈ ವಿಡಿಯೋನಲ್ಲಿ ನೋಡಿ. ಕಾಂಗ್ರೆಸ್ (Congress) ತೊರೆಯುವ ನಿರ್ಧಾರ ಪ್ರಕಟಿಸಿ ವಿಧಾನ ಪರಿಷತ್ ನಾಯಕ ಸಿ ಎಂ ಇಬ್ರಾಹಿಂ (CM Ibrahim) ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಕೆಲ ಟಫ್ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಅನ್ನೋದು ಸಿದ್ದರಾಮಯ್ಯನವರಿಗೆ ಗೊತ್ತಿತ್ತು. ಹಾಗಾಗೇ ಅವರನ್ನು ಕಂಡಕೂಡಲೇ ಭುಸುಗುಡುವುದನ್ನು ಪ್ರಾರಂಭಿಸಿದರು. ನಿಮ್ಮ ಪ್ರಶ್ನೆಗಳಿಗೆ ಈಗ ಉತ್ತರಿಸಲಾರೆ ಎಂದು ಅವರು ಹೇಳಿದ್ದರೆ ಸಭ್ಯತೆ ಅನಿಸುತಿತ್ತು. ಆದರೆ ಸಿದ್ದರಾಮಯ್ಯ ಹಾಗೆ ಮಾಡದೆ, ಮಾಧ್ಯಮದವರ ಮೇಲೆ ರೇಗುತ್ತಾ, ಮೈಕ್​ಗಳನ್ನು ದೂರ ತಳ್ಳುತ್ತಾರೆ!

‘ಏಯ್’ ಅಂತ ಯಾವುದೇ ಹಿರಿಯ, ಪ್ರಜ್ಞಾವಂತ ಮತ್ತು ರಾಷ್ಟ್ರೀಯ ಪಕ್ಷವೊಂದರ ನಾಯಕ ಮಾಧ್ಯಮದವರನ್ನು ಸಂಬೋಧಿಸಲಾರ. ಜನಪ್ರತಿನಿಧಿಗಳನ್ನು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮದ ಕೆಲಸವಾಗಿದೆ. ವೈಯಕ್ತಿಕ ಪ್ರಶ್ನೆಗಳನ್ನೇನೂ ಮಾಧ್ಯಮದವರು ಕೇಳುವುದಿಲ್ಲ. ರಾಜ್ಯಕ್ಕೆ, ಪಕ್ಷಕ್ಕೆ, ಜನರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ. ಪ್ರಶ್ನೆ ಅವರಿಗೆ ಇರುಸು ಮುರುಸು ಮಾಡುವಂಥಾಗಿದ್ದರೆ, ಅದನ್ನು ಓವರ್ ಲುಕ್ ಮಾಡಲಿ, ಆಥವಾ ಸದ್ಯಕ್ಕೆ ಆ ಪ್ರಶ್ನೆಯನ್ನು ಉತ್ತರಿಸಲಾರೆ ಎಂದು ಹೇಳಲಿ.

ಇಲ್ಲಿ ಅವರ ವರ್ತನೆಯನ್ನು ನೀವು ಗಮನಿಸಿ. ಹೊರಗೆ ಬಂದಕೂಡಲೇ ಸಿದ್ದರಾಮಯ್ಯ ಮಾಧ್ಯಮದವರನ್ನು ಅಲ್ಲಿಂದ ಓಡಿಸುವ ಪ್ರಯತ್ನ ಮಾಡುತ್ತಾರೆ. ಅಮೇಲೆ ಪ್ರಶ್ನೆ ತೆಗೆದುಕೊಳ್ಳಲು ಮುಂದಾಗುತ್ತಾರೆ. ಒಬ್ಬ ಪತ್ರಕರ್ತ, ಇಬ್ರಾಹಿಂ ತನಗೆ ಕಾಂಗ್ರೆಸ್ ಪಕ್ಷದಲ್ಲಿ ತಬ್ಬಲಿ ಭಾವ ಕಾಡಿದೆ, ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಅಂತ ಹೇಳಿದ್ದಾರೆ ಅಂತ ಹೇಳುತ್ತಿದ್ದಂತೆಯೇ ಸಿದ್ದರಾಮಯ್ಯನವರಲ್ಲಿ ಇರುಸು ಮುರುಸು ಉಂಟಾಗುತ್ತದೆ.

ಅದಕ್ಕೆ ಅವರು, ನೀವು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ಕೊಡಬೇಕಾ ಅಂತ ಗುಡುಗುತ್ತಾರೆ. ಸ್ವಾಮಿ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೇ, ನಾಳೆ ಇದೇ ಪ್ರಶ್ನೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಂದೀಪ್ ಸುರ್ಜೆವಾಲಾ ಕೇಳುತ್ತಾರೆ, ಅವರಿಗೂ ಹೀಗೆಯೇ ಉತ್ತರಿಸುತ್ತೀರಾ? ನೀವು ಮತ್ತೊಮ್ಮೆ ಮುಖ್ಯಮಂತ್ರಿ ಆದಂತೆಯೇ!!

ಮಾಧ್ಯಮದವರನ್ನು ಕೇವಲವಾಗಿ ನೋಡುವ ಪ್ರವೃತ್ತಿ ಸಿದ್ದರಾಮಯ್ಯ ಅವರಂಥ ಸೀಸನ್ಡ್ ಪೊಲಿಟಿಶಿಯನ್ ಗೆ ಸರಿಕಾಣುವುದಿಲ್ಲ. ಬೇಕಾದಾಗ ಮನೆವರೆಗೆ ಕರೆಸಿ ಹೇಳಿಕೆಗಳನ್ನು ನೀಡುವುದು ಬೇಡವಾದಾಗ ದೂರ ತಳ್ಳುವ ಯೂಸ್ ಅಂಡ್ ಥ್ರೋ ಪಾಲಿಸಿ ಆಕ್ಷೇಪಾರ್ಹ.

ಇದನ್ನೂ ಓದಿ:   ನಾವು ಅಧಿಕಾರಕ್ಕೆ ಬಂದರೆ ಒಬ್ಬರನ್ನೂ ಸುಮ್ಮನೆ ಬಿಡೋದಿಲ್ಲ; ಎಸ್​ಪಿ ಅಭ್ಯರ್ಥಿಯ ವಿಡಿಯೋ ವೈರಲ್