Koppal Flamingo Birds: ತುಂಗೆಯಲ್ಲಿ ಫ್ಲೆಮಿಂಗೋ ವಯ್ಯಾರ! ಬಳುಕುವ ‘ರಾಜಹಂಸ’!

Koppal Flamingo Birds: ತುಂಗೆಯಲ್ಲಿ ಫ್ಲೆಮಿಂಗೋ ವಯ್ಯಾರ! ಬಳುಕುವ ‘ರಾಜಹಂಸ’!

TV9 Web
| Updated By: ಆಯೇಷಾ ಬಾನು

Updated on: Jan 28, 2022 | 7:58 AM

ಪ್ಲೆಮಿಂಗೋ ಪಕ್ಷಿ ಸಂಕುಲದ ಬ್ಯೂಟಿಯೇ ಅಂತದ್ದು.. ಜನರ ಸೂರೆಗೊಂಡು ಮನಸನ್ನು ಲೂಟಿ ಮಾಡುವಂತದ್ದು.. ಅಂದಹಾಗೇ, ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿಯ ತುಂಗಭದ್ರ ಹಿನ್ನೀರಿನತ್ತ ಸಾವಿರಾರು ಫ್ಲೆಮಿಂಗೋ ಪಕ್ಷಿ ಎಂಟ್ರಿ ಕೊಟ್ಟಿವೆ.

ಕೊಪ್ಪಳ: ಥೇಟ್ ಗುಲಾಬಿಯನ್ನೇ ಹೋಲೋ ಬಣ್ಣ… ಎಂಥವರ ಮನಸ್ಸನ್ನೂ, ಕಣ್ಮನವನ್ನೂ ಲಾಬಿ ಮಾಡಿ ಸೆಳೆಯೋ ಗುಣ.. ಕಲರ್ನಲ್ಲಿ ಪಿಂಕ್ ಫ್ಲವರ್ ನಾಚುವಂತೆ.. ಲುಕ್ನಲ್ಲಿ ತಳುಕು-ಬಳುಕುವ ಕನ್ಯೆಯರೂ ಬೆರಗಾಗುವಂತೆ ಅಟ್ರ್ಯಾಕ್ಟ್ ಮಾಡೋ ಅವ್ರನ್ನ ಕಣ್ತುಂಬಿಕೊಳ್ಳಲು ಜನರ ದಂಡು ಅತ್ತ ಮುಖ ಮಾಡಿದೆ… ಯಾರವ್ರು ಅಂದ್ರಾ..? ನೋಡಿ ನಿಮಗೆ ಗೊತ್ತಾಗುತ್ತೆ..

ಪ್ಲೆಮಿಂಗೋ ಪಕ್ಷಿ ಸಂಕುಲದ ಬ್ಯೂಟಿಯೇ ಅಂತದ್ದು.. ಜನರ ಸೂರೆಗೊಂಡು ಮನಸನ್ನು ಲೂಟಿ ಮಾಡುವಂತದ್ದು.. ಅಂದಹಾಗೇ, ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿಯ ತುಂಗಭದ್ರ ಹಿನ್ನೀರಿನತ್ತ ಸಾವಿರಾರು ಫ್ಲೆಮಿಂಗೋ ಪಕ್ಷಿ ಎಂಟ್ರಿ ಕೊಟ್ಟಿವೆ.. ರಾಜಹಂಸ ಅಂತ ಕರೆಸಿಕೊಳ್ಳುವ ಫ್ಲೆಮಿಂಗೋಗಳ ಎಂಟ್ರಿಯಿಂದ, ಹೀನ್ನೀರಿನ ಅಂದ ಹೆಚ್ಚಾಗಿದೆ.

ದಕ್ಷಿಣ ಆಫ್ರಿಕಾದಿಂದ ಬರುವ ಫ್ಲೆಮಿಂಗೋಗಳು ಮೊದಲು ಗುಜರಾತ್ಗೆ ಬರ್ತವೆ.. ಬಳಿಕ, ತುಂಗಭದ್ರಾ ಹಿನ್ನೀರಿನತ್ತ ಮುಖ ಮಾಡುತ್ವೆ.. ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಬಂದಿರೋ ರಾಜಹಂಸಗಳಿಗೆ, ಸೀಗಡಿ, ಏಡಿ, ಶಂಖು ಹುಳ ಫೇವರೆಟ್ ಫುಡ್.. ಮಾರ್ಚ್ ತನಕ ವಾಸ್ತವ್ಯ ಹೂಡುವ ಇವುಗಳಿಗೆ, ಸದಾ ಸಂಗಾತಿ ಜತೆಗಿರಲೇಬೇಕು. ಉದ್ದ ಕುತ್ತಿಗೆ.. ನೀಳ ಕಾಲು.. ರೆಕ್ಕೆ ಬಿಚ್ಚಿದಾಗ ಗೋಚರಿಸೋ ಫ್ಲೆಮಿಂಗೋಗಳ ಆ ಕೆಂಗುಲಾಬಿ ಬಣ್ಣಕ್ಕೆ ಮನಸ್ಸು ಸೋಲದವರೇ ಇಲ್ಲ. ಒಟ್ಟಿನಲ್ಲಿ ರಾಜಹಂಸಗಳು ತುಂಗೆಯ ಒಡಲಲ್ಲಿ ಭಿನ್ನಾಣಗಿತ್ತಿಯರಂತೆ ವೈಯ್ಯಾರದಿಂದ ವಾಕ್ ಮಾಡ್ತಿವೆ.