ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ರವಿ ಡಿ ಚನ್ನಣ್ಣವರ್ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮಕ್ಕೆ ಎಮ್​ಡಿ ಆಗಿ ವರ್ಗಾವಣೆ!!

ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ರವಿ ಡಿ ಚನ್ನಣ್ಣವರ್ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮಕ್ಕೆ ಎಮ್​ಡಿ ಆಗಿ ವರ್ಗಾವಣೆ!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 28, 2022 | 1:06 AM

ಭ್ರಷ್ಟಾಚಾರದ ಅರೋಪ ಎದುರಿಸುತ್ತಿದ್ದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿ ವಿಭಾಗದಲ್ಲಿ ಎಸ್ ಪಿ ಆಗಿದ್ದ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಕೆಲವೇ ದಿನಗಳ ಹಿಂದೆ ನಾವು ಈ ವಿಷಯವನ್ನು ಚರ್ಚೆ ಮಾಡಿದ್ದೆವು. ಭ್ರಷ್ಟಾಚಾರ (corruption) ಅರೋಪ ಎದುರಿಸುವ ಸರ್ಕಾರೀ ಅಧಿಕಾರಿಗಳಿಗೆ ಯಾಕೆ ಶಿಕ್ಷೆಯಾಗುವುದಿಲ್ಲ? ನಿಮಗೆ ಗೊತ್ತಿರಲಿ, ಸರ್ಕಾರೀ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬ ಗುಮಾಸ್ತ ರೂ. 300 ಇಲ್ಲ ರೂ. 500 ಲಂಚ ತೆಗೆದುಕೊಳ್ಳುವಾಗ ಎಸಿಬಿ ದಾಳಿಯಲ್ಲಿ (ACB raid) ಸಿಕ್ಕಿಬಿದ್ದರೆ, ಅವನನ್ನು ನಿರ್ದಾಕ್ಷಿಣ್ಯವಾಗಿ ಸಸ್ಪೆಂಡ್ (Suspend) ಮಾಡಿ ಕೆಲ ದಿನಗಳ ಬಳಿಕ ಡಿಸ್ಮಿಸ್ ಕೂಡ ಮಾಡುತ್ತಾರೆ. ಅದರೆ, ಅಧಿಕಾರಿಗಳು ಸಿಕ್ಕಿಬಿದ್ದಾಗ ಅವರಿಗೆ ಬೇರೆ ಮಾನದಂಡ ಉಪಯೋಗಿಸಲಾಗುತ್ತದೆ. ಅಂಥವರನ್ನು ಕೆಲ ದಿನಗಳ ಮಟ್ಟಿಗೆ ಸಸ್ಪೆಂಡ್ ಮಾಡಿ ನಂತರ ವರ್ಗಾ ಮಾಡಲಾಗುತ್ತದೆ. ಇದು ಅಂದಕಾಲತ್ತಿಲ್ ನಡೆದುಕೊಂಡು ಬಂದಿರುವ ಅನಿಷ್ಟ ಪದ್ಧತಿ. ಭ್ರಷ್ಟಾಚಾರ ಯಾರೇ ನಡೆಸಿದರೂ ಅದು ಭ್ರಷ್ಟಾಚಾರ. ಅದರೆ, ನಮ್ಮ ರಾಜ್ಯದಲ್ಲಿ ಅಧಿಕಾರಿಗಳು ನಡೆಸುವ ಭ್ರಷ್ಟಾಚಾರ ಶಿಷ್ಟಾಚಾರ ಅನಿಸಿಕೊಳ್ಳುತ್ತಿದೆ. ಇದು ಯಾವ ಸೀಮೆ ನ್ಯಾಯ ಮಾರಾಯ್ರೇ?

ಅನೇಕ ಐಎಎಸ್, ಐಪಿಎಸ್ ಮತ್ತು ಬೇರೆ ದರ್ಜೆಯ ಅಧಿಕಾರಿಗಳು ಕೋಟಿಗಟ್ಟಲೆ ಭ್ರಷ್ಟಾಚಾರ ನಡೆಸಿ ಸಿಕ್ಕಿಬಿದ್ದಿದ್ದಾರೆ. ಅವರಲ್ಲಿ ಎಷ್ಟು ಜನ ಡಿಸ್ಮಿಸ್ ಆಗಿದ್ದಾರೆ ಅಂತ ನೀವು ದಾಖಲೆಗಳನ್ನು ಪರಿಶೀಲಿಸಿದರೆ ಗಾಬರಿಗೊಳ್ಳುತ್ತೀರಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಡಿಮಾನಿಟೈಸೇಶನ್ ಘೋಷಣೆ ಮಾಡಿದಾಗ ಹಲವು ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೆ ಹಣ ಬಚ್ಚಿಟ್ಟಿದ್ದು ಪತ್ತೆಯಾಗಿತ್ತು.

ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗಲೂ ಅಧಿಕಾರಿಗಳು ಮಿತಿಮೀರಿದ ಆಸ್ತಿ ಹೊಂದಿರುವುದು ಪತ್ತೆಯಾಗುತ್ತದೆ. ಅಂಥವರನ್ನು ಕೆಲಸದಿಂದ ಅಮಾನತು ಮಾಡಲಾಗುತ್ತದೆ. ಕೆಲವರ ವಿಷಯದಲ್ಲಿ ಅದೂ ಕೂಡ ಆಗುವುದಿಲ್ಲ. ಓಕೆ ಅಮಾನತುಗೊಂಡವರು ಹೆಚ್ಚೆಂದರೆ ಮೂರು ತಿಂಗಳು ಮನೆಯಲ್ಲಿರುತ್ತಾರೆ. ಆಮೇಲೆ ಬಡ್ತಿ ನೀಡಿ ಬೇರೆ ಸ್ಥಳಕ್ಕೆ ಟ್ರಾನ್ಸ್ಫರ್ ಮಾಡಲಾಗುತ್ತದೆ. ಭ್ರಷ್ಟಶ್ರೀಗಳಿಗೆ ಕೆಲಸ ವಾಪಸ್ಸು ಮತ್ತು ಬಡ್ತಿಯ ಬೋನಸ್ಸು!!

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆ ಎಂದರೆ, ಭ್ರಷ್ಟಾಚಾರದ ಅರೋಪ ಎದುರಿಸುತ್ತಿದ್ದ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿ ವಿಭಾಗದಲ್ಲಿ ಎಸ್ ಪಿ ಆಗಿದ್ದ ಅವರನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಅವರ ವಿರುದ್ಧ ಮಾಡಲಾಗಿದ್ದ ಆರೋಪದ ತನಿಖೆ ನಡೆಯುತ್ತಿದೆಯೇ? ಗೊತ್ತಿಲ್ಲ ಮಾರಾಯ್ರೇ. ಚನ್ನಣ್ಣವರ್ ವಿರುದ್ಧ ಕರ್ನಾಟಕ ಮುಖ್ಯ ಕಾರ್ಯದರ್ಶಿಗಳಿಗೆ ದೂರು ಸಲ್ಲಿಸಲಾಗಿತ್ತು. ಒಂದು ಪಕ್ಷ ತನಿಖೆ ನಡೆಯುತ್ತಿದ್ದರೆ ಅವರ ಸೇವೆಯನ್ನು ಅಮಾನತಿನಲ್ಲಿ ಇಡಬೇಕಿತ್ತು. ಅದರರ್ಥ ತನಿಖೆ ನಡೆಯುತ್ತಿಲ್ಲ.

ಎಂಥಾ ಲೋಕವಯ್ಯಾ ಇದು ಎಂಥಾ ಲೋಕವಯ್ಯಾ!!

ಇದನ್ನೂ ಓದಿ:   ಆರೋಪಕ್ಕೊಳಗಾಗಿರುವ ಪೊಲೀಸ್ ಅಧಿಕಾರಿಗಳ ತನಿಖೆ ಯಾವ ಹಂತದಲ್ಲಿದೆ ಅಂತ ಹೇಳಲು ತಡವರಿಸಿದರು ಗೃಹ ಸಚಿವ ಅರಗ ಜ್ಞಾನೇಂದ್ರ!