‘ಧನು ಅವರದ್ದು ಶುದ್ಧ ಮನಸ್ಸು’; ಡಾಲಿಯನ್ನು ಹಾಡಿ ಹೊಗಳಿದ ರಚಿತಾ ರಾಮ್
ರಚಿತಾ ರಾಮ್ ಅವರು ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಸೆಪ್ಟೆಂಬರ್ 16ರಂದು ತೆರೆಗೆ ಬರುತ್ತಿದೆ.
ರಚಿತಾ ರಾಮ್ (Rachita Ram) ಅವರು ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಸೆಪ್ಟೆಂಬರ್ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಚಿತಾಗೆ ಜತೆಯಾಗಿ ಧನಂಜಯ್ ನಟಿಸಿದ್ದಾರೆ. ಇವರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದು. ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಸೆಪ್ಟೆಂಬರ್ 13ರಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಧನಂಜಯ್ ಅವರನ್ನು ಹೊಗಳಿದ್ದಾರೆ ರಚಿತಾ ರಾಮ್.