ಸಿಖ್ಖರಿಗೆ ಮಾಡಿದ ಅವಮಾನ; ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ

Updated on: Feb 05, 2026 | 7:33 PM

ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆಯಲು ಅವರು ಸಿಖ್ ಸಮುದಾಯದವರು ಎಂಬುದೇ ಕಾರಣ. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಇದು ಕಾಂಗ್ರೆಸ್‌ನಲ್ಲಿ ತುಂಬಿರುವ ಸಿಖ್ಖರ ಮೇಲಿನ ದ್ವೇಷದ ಅಭಿವ್ಯಕ್ತಿಯಾಗಿತ್ತು. ರವನೀತ್ ಬಿಟ್ಟು ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಕುಟುಂಬದ ಸದಸ್ಯ. ಅಂಥವರನ್ನು ದೇಶದ್ರೋಹಿ ಎಂದು ಕರೆಯುವುದನ್ನು ದೇಶ ಹೇಗೆ ಸಹಿಸಿಕೊಳ್ಳುತ್ತದೆ? ಇದು ಅತ್ಯಂತ ದುರದೃಷ್ಟಕರ ಎಂದು ಪ್ರಧಾನಿ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ನವದೆಹಲಿ, ಫೆಬ್ರವರಿ 5: ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದರು. ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಹುಲ್ ಗಾಂಧಿ (Rahul Gandhi) ಇದುವರೆಗೂ ಕಾಂಗ್ರೆಸ್ ತೊರೆದ ಯಾರನ್ನೂ ದೇಶದ್ರೋಹಿ ಎಂದು ಕರೆದಿಲ್ಲ, ಆದರೆ ರವನೀತ್ ಬಿಟ್ಟು ಸಿಖ್ ಆಗಿರುವುದರಿಂದಲೇ ಅವರನ್ನು ದೇಶದ್ರೋಹಿ ಎಂದು ಕರೆದರು. ಸಿಖ್ಖರನ್ನು ಕಂಡರೆ ಕಾಂಗ್ರೆಸ್​​ನವರಿಗೆ ಆಗುವುದಿಲ್ಲ ಎಂದು ಮೋದಿ ಟೀಕಿಸಿದ್ದಾರೆ.

“ನಿನ್ನೆ ಸಂಸತ್ ಹೊರಗೆ ಒಂದು ಘಟನೆ ನಡೆಯಿತು. ಈ ಸದನದ ಸಂಸದ ರವನೀತ್ ಸಿಂಗ್ ಬಿಟ್ಟು ಅವರನ್ನು ಕಾಂಗ್ರೆಸ್‌ನ ಯುವ ರಾಜ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿ ‘ದೇಶದ್ರೋಹಿ’ ಎಂದು ಕರೆದರು. ಅವರ ದುರಹಂಕಾರ ಆಕಾಶಕ್ಕೇರಿದೆ. ಕಾಂಗ್ರೆಸ್ ಲೆಕ್ಕವಿಲ್ಲದಷ್ಟು ಬಾರಿ ವಿಭಜನೆಯಾಗಿದೆ, ಅದೆಷ್ಟೋ ಕಾಂಗ್ರೆಸ್ ನಾಯಕರು ಪಕ್ಷ ಬದಲಾಯಿಸಿದ್ದಾರೆ. ಆದರೆ, ಯಾರನ್ನೂ ಇದುವರೆಗೂ ಅವರು ‘ದೇಶದ್ರೋಹಿ’ ಎಂದು ಕರೆಯಲಿಲ್ಲ. ರವನೀತ್ ಸಿಂಗ್ ಬಿಟ್ಟು ಅವರನ್ನು ದೇಶದ್ರೋಹಿ ಎಂದು ಕರೆಯಲು ಅವರು ಸಿಖ್ ಸಮುದಾಯದವರು ಎಂಬುದೇ ಕಾರಣ. ಇದು ಸಿಖ್ಖರಿಗೆ ಮಾಡಿದ ಅವಮಾನ, ಗುರುಗಳಿಗೆ ಮಾಡಿದ ಅವಮಾನ. ಇದು ಕಾಂಗ್ರೆಸ್‌ನಲ್ಲಿ ತುಂಬಿರುವ ಸಿಖ್ಖರ ಮೇಲಿನ ದ್ವೇಷದ ಅಭಿವ್ಯಕ್ತಿಯಾಗಿತ್ತು. ರವನೀತ್ ಬಿಟ್ಟು ದೇಶಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಿದ ಕುಟುಂಬದ ಸದಸ್ಯ. ಅಂಥವರನ್ನು ದೇಶದ್ರೋಹಿ ಎಂದು ಕರೆಯುವುದನ್ನು ದೇಶ ಹೇಗೆ ಸಹಿಸಿಕೊಳ್ಳುತ್ತದೆ? ಇದು ಅತ್ಯಂತ ದುರದೃಷ್ಟಕರ” ಎಂದು ಪ್ರಧಾನಿ ಮೋದಿ ಆಕ್ರೋಶ ಹೊರಹಾಕಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More