‘ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ’; ರಾಹುಲ್ ಗಾಂಧಿ ವ್ಯಂಗ್ಯ

Updated on: Aug 12, 2026 | 4:49 PM

ಅಮಿತ್ ಶಾ ಅವರ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ವಿರೋಧ ಪಕ್ಷಗಳಿಗೆ ಗೃಹ ಸಚಿವರಿಂದ ಉಪದೇಶ ಅಥವಾ ಉಪನ್ಯಾಸ ಕೇಳುವ ಆಸಕ್ತಿಯಿಲ್ಲ. ಅದರ ಬದಲಿಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಉತ್ತರಗಳು ಬೇಕಾಗಿವೆ ಎಂದು ಹೇಳಿದ್ದಾರೆ. "ಅಮಿತ್ ಶಾ ಅವರು ನಮಗೆ ಉಪನ್ಯಾಸ ನೀಡುವುದರಲ್ಲಿ ವಿಪಕ್ಷಗಳಿಗೆ ಯಾವುದೇ ಆಸಕ್ತಿಯಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ" ಎಂದು ರಾಹುಲ್ ಗಾಂಧಿ ತಿಳಿಸಿದರು.

ನವದೆಹಲಿ, ಆಗಸ್ಟ್ 12: ಸಂಸತ್​​ನಲ್ಲಿ ಚರ್ಚೆಗೆ ಸಿದ್ಧ ಎಂಬ ಅಮಿತ್ ಶಾ ಅವರ ಆಫರ್‌ಗೆ ತಿರುಗೇಟು ನೀಡಿದ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ವಿರೋಧ ಪಕ್ಷಕ್ಕೆ ಗೃಹ ಸಚಿವರಿಂದ ಉಪದೇಶ ಅಥವಾ ಉಪನ್ಯಾಸ ಕೇಳುವ ಆಸಕ್ತಿಯಿಲ್ಲ. ನಮಗೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಉತ್ತರಗಳು ಬೇಕಾಗಿವೆ ಎಂದು ಸ್ಪಷ್ಟಪಡಿಸಿದರು. “ಅವರು ಏನು ಹೇಳುತ್ತಾರೆ ಎಂಬ ಬಗ್ಗೆ ನಮಗೆ ಯೋಚನೆಯಿಲ್ಲ” ಎಂದು ರಾಹುಲ್ ವಾಗ್ದಾಳಿ ನಡೆಸಿದರು.

“ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಲು ಮತ್ತು ಲಾಠಿಚಾರ್ಜ್ ಮಾಡಲು ಆದೇಶ ನೀಡಿದ್ದು ಯಾರು? ಒಂದು ವೇಳೆ ಅಮಿತ್ ಶಾ ಅವರೇ ಈ ಆದೇಶ ನೀಡಿದ್ದರೆ ಅವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದರು. ಅಲ್ಲದೆ, ಕಳೆದ 20 ದಿನಗಳಿಂದ ಗೃಹ ಸಚಿವರು ಸಂಸತ್ತಿಗೆ ಬಾರದೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 12, 2026 04:48 PM
Loading...
Unable to load recommendations.
Follow Us