ಪಂಜಾಬ್‌ಗೆ ಕೂಡಲೆ ಸಮಗ್ರ ಪ್ರವಾಹ ಪರಿಹಾರ ಪ್ಯಾಕೇಜ್ ಘೋಷಿಸಿ; ಮೋದಿಗೆ ರಾಹುಲ್ ಗಾಂಧಿ ಒತ್ತಾಯ
ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರವಾಹದಿಂದಾಗಿ ಪಂಜಾಬ್ ಸುಮಾರು 20,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಆದರೆ, ಪ್ರಧಾನಿ ಮೋದಿ ಘೋಷಿಸಿದ 1600 ಕೋಟಿ ರೂ.ಗಳ ಆರಂಭಿಕ ಪರಿಹಾರದ ಪ್ಯಾಕೇಜ್ ಪಂಜಾಬ್ ಜನರಿಗೆ ಮಾಡಿದ ಅನ್ಯಾಯ ಎಂದು ಹೇಳಿದ್ದರು. ಲಕ್ಷಗಟ್ಟಲೆ ಮನೆಗಳು ನೆಲಸಮವಾಗಿವೆ, 4 ಲಕ್ಷ ಎಕರೆಗೂ ಹೆಚ್ಚು ಬೆಳೆಗಳು ನಾಶವಾಗಿವೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಾಣಿಗಳು ಕೊಚ್ಚಿ ಹೋಗಿವೆ. ಆದರೂ ಪಂಜಾಬ್ ಜನರು ಧೈರ್ಯ ಮತ್ತು ಚೈತನ್ಯವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಬೆಂಬಲ ಮತ್ತು ಶಕ್ತಿ ಬೇಕು. ತಕ್ಷಣವೇ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ನಾನು ಮತ್ತೊಮ್ಮೆ ಪ್ರಧಾನಿಯನ್ನು ಒತ್ತಾಯಿಸುತ್ತೇನೆ" ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 22: ಪಂಜಾಬ್‌ನಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ನಂತರ ಪಂಜಾಬ್‌ಗೆ ಸಮಗ್ರ ಪರಿಹಾರ ಪ್ಯಾಕೇಜ್ ಅನ್ನು ತಕ್ಷಣ ಘೋಷಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (rahul gandhi) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು. ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರವಾಹದಿಂದಾಗಿ ಪಂಜಾಬ್ ಸುಮಾರು 20,000 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ. ಆದರೆ, ಪ್ರಧಾನಿ ಮೋದಿ ಘೋಷಿಸಿದ 1600 ಕೋಟಿ ರೂ.ಗಳ ಆರಂಭಿಕ ಪರಿಹಾರದ ಪ್ಯಾಕೇಜ್ ಪಂಜಾಬ್ ಜನರಿಗೆ ಮಾಡಿದ ಅನ್ಯಾಯ ಎಂದು ಹೇಳಿದ್ದರು. ಲಕ್ಷಗಟ್ಟಲೆ ಮನೆಗಳು ನೆಲಸಮವಾಗಿವೆ, 4 ಲಕ್ಷ ಎಕರೆಗೂ ಹೆಚ್ಚು ಬೆಳೆಗಳು ನಾಶವಾಗಿವೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಾಣಿಗಳು ಕೊಚ್ಚಿ ಹೋಗಿವೆ. ಆದರೂ ಪಂಜಾಬ್ ಜನರು ಧೈರ್ಯ ಮತ್ತು ಚೈತನ್ಯವನ್ನು ಪ್ರದರ್ಶಿಸಿದ್ದಾರೆ. ಅವರಿಗೆ ಬೆಂಬಲ ಮತ್ತು ಶಕ್ತಿ ಬೇಕು. ತಕ್ಷಣವೇ ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ನಾನು ಮತ್ತೊಮ್ಮೆ ಪ್ರಧಾನಿಯನ್ನು ಒತ್ತಾಯಿಸುತ್ತೇನೆ” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

