AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕೋಡಿ: ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!

ಚಿಕ್ಕೋಡಿ: ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!

Sahadev Mane
| Edited By: |

Updated on:Dec 28, 2025 | 2:15 PM

Share

ಹಾಲು ಕುಡಿಯಬೇಕಿದ್ದ 5 ವರ್ಷದ ಬಾಲಕನಿಗೆ ಮದ್ಯ ಕುಡಿಸಿ ಅಜ್ಜನೋರ್ವ ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್​​ ಒಂದರಲ್ಲಿ ನಡೆದಿದೆ. ಅಲ್ಲಿದ್ದವರ ವಿರೋಧದ ನಡುವೆಯೂ ಗ್ಲಾಸ್​​ನಲ್ಲಿ ಮದ್ಯ ಹಾಕಿ ಮೊಮ್ಮಗನಿಗೆ ತಾತ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್​​ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕೋಡಿ, ಡಿಸೆಂಬರ್​​ 28: ಮದ್ಯ ಸೇವಿಸಲು ಬಾರ್​​​ಗೆ ಸ್ನೇಹಿತರು,ಸಂಬಂಧಿಕರನ್ನು ಕರೆದುಕೊಂಡು ಹೋಗೋದನ್ನ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದ್ರೆ ಬೆಳಗಾವಿಯಲ್ಲೊಬ್ಬ ಪಾಪಿ ಅಜ್ಜ ಮೊಮ್ಮಗನ ಬಾರ್​​ಗೆ ಕರೆದುಕೊಂಡು ಹೋಗಿದ್ದಲ್ಲದೆ ಆತನಿಗೆ ಎಣ್ಣೆ ಕುಡಿಸಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಬಾರ್​​ ಒಂದರಲ್ಲಿ ಘಟನೆ ನಡೆದಿದ್ದು, ಅಲ್ಲಿದ್ದವರ ವಿರೋಧದ ನಡುವೆಯೂ ಅಜ್ಜ ಚಿಕ್ಕ ಹುಡುಗನಿಗೆ ಕುಡಿಯಲು ಮದ್ಯ ನೀಡಿದ್ದಾನೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Dec 28, 2025 02:12 PM