ಮೈನವಿರೇಳುತ್ತದೆ ನಮ್ಮ ರಾಯಚೂರಿನ ಈ ಬಾಲಕನ ರಾಷ್ಟ್ರಭಕ್ತಿಯನ್ನು ನೋಡಿದರೆ! ವಿಡಿಯೋ ನೋಡಿ

| Updated By: ಸಾಧು ಶ್ರೀನಾಥ್​

Updated on: May 29, 2024 | 9:47 AM

ಬಾಲಕನ ಈ ದೇಶ ಪ್ರೇಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾಲಕನ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೃದಯಾಂತರಾಳದಿಂದ ಆತನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಜೈ ಭಾರತಾಂಬೆ! ಈ ನಿನ್ನ ಸುಪುತ್ರನ ಬಗ್ಗೆ ನೀನೇ ಕಾಳಜಿ ವಹಿಸು ಎಂದು ಹಾರೈಸುತ್ತಿದ್ದಾರೆ.

ರಾಯಚೂರು: ಚಿಂದಿ ಆಯುವ ಈ ಬಾಲಕನ ರಾಷ್ಟ್ರ ಪ್ರೇಮವನ್ನು ಒಮ್ಮೆ ಕಣ್ತುಂಬಿಕೊಂಡುಬಿಡಿ. ಆತನ ತನ್ಮಯತೆ, ರಾಷ್ಟ್ರಗೀತೆಗೆ (national anthem) ಹಾಡುವವರೆ ಆತ ತನ್ನ ಕಾಯಕಕ್ಕೆ ರೆಸ್ಟ್​ ಕೊಟ್ಟು, ದೇಶಪ್ರೇಮದ ಸೇವೆಯಲ್ಲಿ ತೊಡಗುವುದನ್ನು ಒಮ್ಮೆ ಅಲ್ಲ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಆ ಅಬೋಧ ಬಾಲಕನಿಗೆ (raichur boy) ಎಲ್ಲ ಎದ್ದು ನಿಂತು ಒಂದು ಬಿಗ್​ ಸೆಲ್ಯೂಟ್ ಹೇಳೋಣ.

ಎಂದಿನಿಂತೆ ಆ ಚಿಕ್ಕ ಬಾಲಕ ಚಿಂದಿ ಆಯುತ್ತಾ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕದಲ್ಲಿ ನಿರತನಾಗಿದ್ದಾನೆ. ರಾಯಚೂರಿನಲ್ಲಿ ಆ ವಿಶಾಲ ಮೈದಾನದಲ್ಲಿ ರಾಷ್ಟ್ರ ಗೀತೆ ಮೊಳಗುತ್ತಿರುವುದು ಆ ಬಾಲಕನ ಕಿವಿಗೆ ಬೀಳುತ್ತದೆ. ಆ ಮಗುವಿಗೆ ಅದೇನನ್ನಿಸಿತೋ, ಅದು ಯಾರು ಹೇಳಿಕೊಟ್ಟಿದ್ದರೋ, ಅದೆಲ್ಲಿ ನೋಡಿ ಕಲಿತಿದ್ದನೋ ಆದರೆ… ತನ್ನ ಕೈಯಲ್ಲಿದ್ದ, ಚಿಂದಿ ತುಂಬಿಕೊಳ್ಳಲು ಹೆಗಲ ಮೇಲೆ ಇಳಿಬಿಟ್ಟಿದ್ದ ಚೀಲವನ್ನು ಸಾವಕಾಶವಾಗಿ ನೆಲದ ಮೇಲಿಟ್ಟು, ಅಟೆಂಷನ್​​ಗೆ ಬಂದು ರಾಷ್ಟ್ರ ಗೀತೆಗೆ ಗೌರವ ಅರ್ಪಣೆ ಸಲ್ಲಿಸಿದ್ದಾನೆ. ಓಹ್​! ಅದ ನೋಡಿದರೆ ಎಂತಹ ನಿರ್ದಯಿಯೇ ಆಗಲಿ ಮೈಪುಳಕಗೊಂಡು ಆ ಬಾಲಕ ರಾಷ್ಟ್ರಪ್ರೇಮಕ್ಕೆ ನಿಂತಲ್ಲೇ ಸೆಲ್ಯೂಟ್ ಮಾಡುವುದು ಖಚಿತ.

ಇದನ್ನೂ ಓದಿ: Life Story of Chanakya – ಕಡುಕಷ್ಟಗಳ ನಡುವೆ ಅಪಾರ ಜ್ಞಾನ ಸಂಪಾದಿಸಿದ ಚಾಣಕ್ಯನ ರಣರೋಚಕ ಕಹಾನಿ ಇಲ್ಲಿದೆ, ತಪ್ಪದೆ ಓದಿ

ಅಂದಹಾಗೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಸಂತೋಷ್ ಅನ್ನೋ ಬಾಲಕನಿಂದ ಈ ರಾಷ್ಟ್ರ ಗೌರವ ಸಮರ್ಪಣೆಯಾಗಿದೆ. ಶಾಲೆಯೊಂದರ ಅವರಣದ ಬಳಿ ಚಿಂದಿ ಆರಿಸಲು ಹೋಗಿದ್ದಾಗ, ಶಾಲೆಯಿಂದ ತನ್ನದೇ ವಯೋಮಾನದ ಮಕ್ಕಳು, ಆದರೆ ಶಿಕ್ಷಣ ಪಡೆಯುವುದರಲ್ಲಿ ತನಗಿಂತ ತುಸು ಹೆಚ್ಚು ಅದೃಷ್ಟವಂತರು ಸುಶ್ರಾವ್ಯವಾಗಿ ಹಾಡುತ್ತಿದ್ದ ರಾಷ್ಟ್ರ ಗೀತೆಯನ್ನು ಕೇಳಿದ ಈತ ಕ್ರಮಶಿಕ್ಷಣ ಇಲ್ಲದಿದ್ದರೆ ಏನಂತೆ ದೇಹದ ಕಣಕಣದಲ್ಲೂ ದೇಶಪ್ರೇಮ ಇದೆ ಎಂದು ಬಿಂಬಿಸುತ್ತಾ, ರಾಷ್ಟ್ರಗೀತೆ ಮುಗಿಯುವವರೆಗೆ ಒಂಚೂರು ಕದಲದೆ ಮೌನವಾಗಿ ನಿಂತು ಭಕ್ತಿ ಮೆರೆದಿದ್ದಾನೆ.

ಬಾಲಕನ ಈ ದೇಶ ಪ್ರೇಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಾಲಕನ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೃದಯಾಂತರಾಳದಿಂದ ಆತನಿಗೆ ಗೌರವ ಸಲ್ಲಿಸುತ್ತಿದ್ದಾರೆ. ಜೈ ಭಾರತಾಂಬೆ! ಈ ನಿನ್ನ ಸುಪುತ್ರನ ಬಗ್ಗೆ ನೀನೇ ಕಾಳಜಿ ವಹಿಸು ಎಂದು ಹಾರೈಸುತ್ತಿದ್ದಾರೆ.

ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:28 am, Wed, 29 May 24

Follow us on