Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ನೆಟ್ವರ್ಕ್ ಸಮಸ್ಯೆ, ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು

ಶಿವಮೊಗ್ಗದಲ್ಲಿ ನೆಟ್ವರ್ಕ್ ಸಮಸ್ಯೆ, ಟವರ್ ಏರಿ ಪ್ರತಿಭಟಿಸಿದ ಗ್ರಾಮಸ್ಥರು

Basavaraj Yaraganavi
| Updated By: ವಿವೇಕ ಬಿರಾದಾರ

Updated on: May 29, 2024 | 10:48 AM

ಬಿ.ಎಸ್ ಎನ್.ಎಲ್ ಮತ್ತು ಅರಣ್ಯ ಇಲಾಖೆಯ ಜಟಾಪಟಿಯಲ್ಲಿ ಕೆಲವು ಟವರ್​ಗಳು ಆಕ್ಟಿವ್ ಆಗಿಲ್ಲ. ವರ್ಕ್ ಪ್ರಾಮ್ ಹೋಂನಲ್ಲಿರುವ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಆಕ್ರೋಶಗೊಂಡ ಮಲೆನಾಡಿನ ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸಿದರು.

ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಗ್ರಾಮಗಳ ಜನರು ನೆಟ್​ವರ್ಕ್​​ಗಾಗಿ ಪರಿತಪಿಸುವಂತಾಗಿದೆ. ಮಳೆಗಾಲ ಆರಂಭವಾಯ್ತು ಅಂದರೆ ಹೊಸನಗರ ತಾಲೂಕಿನಲ್ಲಿ ವಿದ್ಯುತ್​ನ ಸಮಸ್ಯೆ ಎದುರಾಗುತ್ತದೆ. ಅದರಲ್ಲೂ ಮತ್ತಿಮನೆ ಗ್ರಾಮ ಪಂಚಾಯಿತಿಯ, ಸಂಪೇಕಟ್ಟೆ, ನಿಟ್ಟೂರು ಮತ್ತು ಸುತ್ತಮುತ್ತಲ ಭಾಗದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ ಎದುರಾಗುತ್ತದೆ. ಪದೇ ಪದೆ ಎದುರಾಗುತ್ತಿರುವ ಸಮಸ್ಯೆಯಿಂದ ರೊಚ್ಚೆಗೆದ್ದ ಗ್ರಾಮಸ್ಥರು ಈಗ ಟವರ್ ಏರಿ ಪ್ರತಿಭಟನೆ ನಡೆಸಿದರು.

ಬಿ.ಎಸ್.ಎನ್.ಎಲ್ ನವರು ಗ್ರಾಮಸ್ಥರಿಗೆ ಸರಿಯಾದ ಟವರ್ ಸೇವೆಯನ್ನು ಒದಗಿಸುತ್ತಿಲ್ಲ. ಟವರ್​ಗಳ ನಿರ್ವಹಣೆಯ ಜವಬ್ದಾರಿಯನ್ನು ಖಾಸಗಿ ಸಂಸ್ಥೆಯವರಿಗೆ ನೀಡಲಾಗಿದ್ದು, ಅವರುಗಳು ಟವರ್ ಬಳಿ ಸುಳಿವುದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮಸ್ಥರು ಟವರ್ ಏರಿ ಪ್ರತಿಭಟನೆ ನಡೆಸುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ವಿದ್ಯುತ್‌ ಇಲ್ಲದಿದ್ದರು ಜನರೇಟರ್‌ ಮೂಲಕ ನೆಟ್‌ವರ್ಕ್‌ ಇರುವಂತೆ ನೋಡಿಕೊಳ್ಳಬೇಕು ಎಂದು ಜನರು ಪಟ್ಟು ಹಿಡಿದರು ಅಧಿಕಾರಿಗಳು ಆರು ದಿನಗಳ ಕಾಲಾವಕಾಶ ಕೇಳಿದ ನಂತರ ಷರತ್ತಿನ ಮೇರೆಗೆ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ