ಹೈದರಾಬಾದ್ನಲ್ಲಿ ಸತತ ಎರಡು ಗಂಟೆ ಸುರಿದ ಮಳೆ, ರಸ್ತೆಗಳೆಲ್ಲ ಜಲಾವೃತ, ವಾಹನ ಸವಾರರ ಪರದಾಟ
ಬೆಂಗಳೂರು ಮತ್ತು ಹೈದರಾಬಾದ್ ನಂಥ ಸಿಲಿಕಾನ್ ವ್ಯಾಲಿಗಳಲ್ಲಿ ರಸ್ತೆಗಳು ಅಧೋಗತಿ ತಲುಪಿವೆ. ನಗರಗಳಲ್ಲಿರುವ ರಾಜಾಕಾಲುವೆಗಳ ಮೇಲೆ ಅತಿಕ್ರಮಣ ನಡೆದಿರುವುದರಿಂದ ಈ ಸ್ಥಿತಿ ಉಂಟಾಗುತ್ತಿದೆ ಎಂದು ಅರ್ಬನ್ ಮತ್ತು ಟೌನ್ ಪ್ಲ್ಯಾನಿಂಗ್ ಪರಿಣಿತರು ಹೇಳುತ್ತಾರೆ. ಕಾಲುವೆಗಳ ಮೇಲೂ ಕಟ್ಟಡಗಳ ನಿರ್ಮಾಣವಾದರೆ ನೀರು ಹೇಗೆ ಹರಿದು ಹೋದೀತು?
ಹೈದರಾಬಾದ್: ಮಳೆ ಸುರಿಯಲಾಂಭಿಸಿದರೆ ತೆಲಂಗಾಣದ ರಾಜಧಾನಿ ಕರ್ನಾಟಕದ ರಾಜಧಾನಿಗಿಂತ ಬೇರೆಯಲ್ಲ. ಹೈದರಾಬಾದ್ ನಗರದಲ್ಲೂ ರಸ್ತೆಗಳು ಜಲಾವೃತಗೊಳ್ಳುತ್ತವೆ ಮತ್ತು ಯಾವ ಪರಿ ರಸ್ತೆಗಳಲ್ಲಿ ನೀರು ಹರಿಯುತ್ತದೆ ಅಂತ ತಿಳಿಯಲು ಈ ದೃಶ್ಯ ಸಾಕು. ನಗರದಲ್ಲಿ ಸತತವಾಗಿ 2 ಗಂಟೆ ಕಾಲ ಸುರಿದ ಮಳೆಯಿಂದ ಎಲ್ಲ ಪ್ರಮುಖ ರಸ್ತೆಗಳಲ್ಲಿ ನದಿಯಂತೆ ನೀರು ಹರಿದಿದೆ. ಹೈದರಾಬಾದ್ ಓಲ್ಡ್ ಸಿಟಿ ಪ್ರದೇಶ ಮತ್ತು ಅಮೀರ್ ಪೇಟ್ ಏರಿಯಾದಲ್ಲಿ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಕೂಟರ್ ಮೇಲೆ ಹೋಗುತ್ತಿದ್ದ ಈ ವ್ಯಕ್ತಿಯ ಪಾಡು ನೋಡಿ. ರಸ್ತೆಯ ಒಂದು ಭಾಗದಲ್ಲಿ ನೀರು ಏಕಾಏಕಿ ರಭಸವಾಗಿ ನುಗಿದ್ದರಿಂದ ಅವನು ತನ್ನ ವಾಹನದ ಸಮೇತ ಹಿಂಭಾಗಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಅವನ ಸಹಾಯಕ್ಕೆ ಇಬ್ಬರು ಧಾವಿಸುತ್ತಾರಾದರೂ ನೀರಿನ ರಭಸಕ್ಕೆ ಅವರು ಸಹ ಕೊಚ್ಚಿಕೊಂಡು ಹೋಗುತ್ತಾರೆ. ಕೊನೆಗೆ ಮತ್ತಷ್ಟು ಜನ ಸೇರಿ ಬೈಕ್ ಸವಾರ ಮತ್ತು ವಾಹನವನ್ನು ನೀರಿನಿಂದ ಹೊರಗೆಳೆದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್