‘ಕಲ್ಕಿ 2898 ಎಡಿ’ ಶೋ ವೇಳೆ ಪಿವಿಆರ್ ಒಳಗೆ ಸುರಿಯಿತು ಮಳೆ ನೀರು; ವಿಡಿಯೋ ವೈರಲ್
ಗುಣಮಟ್ಟ ಚೆನ್ನಾಗಿ ಇರುತ್ತದೆ ಎಂಬ ಕಾರಣಕ್ಕೆ ಪ್ರೇಕ್ಷಕರು ಮಲ್ಟಿಪ್ಲೆಕ್ಸ್ಗೆ ಹೋಗುತ್ತಾರೆ. ಆದರೆ ಹೈದರಾಬಾದ್ನ ಪಿವಿಆರ್ ಒಳಗೆ ಮಳೆ ಸುರಿದಿದೆ! ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನ ಆಗುವಾಗಲೇ ಮಲ್ಟಿಪ್ಲೆಕ್ಸ್ ಒಳಗೆ ಮಳೆ ನೀರು ಬೀಳಲು ಆರಂಭಿಸಿದೆ. ಇದರಿಂದ ಪ್ರೇಕ್ಷಕರಿಗೆ ಕಿರಿಕಿರಿ ಆಗಿದೆ. ಅಲ್ಲದೇ, ಶಾರ್ಟ್ ಸರ್ಕ್ಯೂಟ್ ಆಗಬಹುದು ಎಂಬ ಆತಂಕ ಕಾಡಿದೆ.
ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಅಚ್ಚರಿ ಏನೆಂದರೆ, ಹೈದರಾಬಾದ್ನಲ್ಲಿ ಚಿತ್ರಮಂದಿರದ ಒಳಗೆ ಮಳೆ ನೀರು ಸುರಿದಿದೆ. ಅದು ಕೂಡ ಮಲ್ಟಿಪ್ಲೆಕ್ಸ್ನಲ್ಲಿ! ಪ್ರಭಾಸ್ ನಟನೆ ‘ಕಲ್ಕಿ 2898 ಎಡಿ’ ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಹೈದರಾಬಾದ್ನ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಈ ಸಿನಿಮಾವನ್ನು ನೋಡುತ್ತಿದ್ದ ಪ್ರೇಕ್ಷಕರಿಗೆ ಶಾಕ್ ಆಗಿದೆ. ಅದಕ್ಕೆ ಕಾರಣ ಆಗಿದ್ದು ಮಳೆ ನೀರು. ಹೌದು, ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿರುವಾಗಲೇ ಛಾವಣಿಯಿಂದ ಮಳೆ ನೀರು ಸುರಿದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಸಿನಿಮಾ ಹಾಲ್ ಒಳಗೆ ಮಳೆ ನೀರು ಬೀಳಲು ಆರಂಭಿಸಿದ ನಂತರವೂ ಪಿವಿಆರ್ನವರು ‘ಕಲ್ಕಿ 2898 ಎಡಿ’ ಸಿನಿಮಾದ ಪ್ರದರ್ಶನವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ. ಇದರಿಂದ ಪ್ರೇಕ್ಷಕರಿಗೆ ಸಖತ್ ಕಿರಿಕಿರಿ ಆಗಿದೆ. ಈ ಬಗ್ಗೆ ಮ್ಯಾನೇಜ್ಮೆಂಟ್ ಬಳಿ ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಆಗ ಅವರಿಂದ ಉಡಾಫೆಯ ಉತ್ತರ ಬಂದಿದೆ. ಬೇಕಿದ್ದರೆ ಪೊಲೀಸರಿಗೆ ದೂರು ನೀಡಿ ಎಂದು ಪಿವಿಆರ್ನವರು ಹೇಳಿದ್ದನ್ನು ಕೇಳಿ ಪ್ರೇಕ್ಷಕರು ಗರಂ ಆಗಿದ್ದಾರೆ.
ಇದನ್ನೂ ಓದಿ: ಅಶ್ಲೀಲತೆ, ರಕ್ತಪಾತ ಇಲ್ಲದೇ ಸಾವಿರ ಕೋಟಿ ರೂ. ಗಳಿಕೆ: ‘ಅನಿಮಲ್’ ಚಿತ್ರಕ್ಕೆ ತಿವಿದ ‘ಕಲ್ಕಿ 2898 ಎಡಿ’ ನಿರ್ದೇಶಕ
ಏಕಪರದೆ ಚಿತ್ರಮಂದಿರಗಳಿಗೆ ಹೋಲಿಸಿದರೆ ಪಿವಿಆರ್ ರೀತಿಯ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ಟಿಕೆಟ್ ದರ ದುಬಾರಿ ಆಗಿರುತ್ತದೆ. ಅಲ್ಲದೇ ತಿಂಡಿ-ತಿನಿಸು ಹಾಗೂ ಪಾನಿಯಗಳ ಬೆಲೆ ಕೂಡ ಹೆಚ್ಚಿರುತ್ತದೆ. ಪಾರ್ಕಿಂಗ್ಗೂ ಅಧಿಕ ಹಣ ತೆರಬೇಕು. ಇಷ್ಟೆಲ್ಲ ಹಣ ನೀಡಿದ ನಂತರವೂ ಮಳೆ ನೀರು ಸೋರುವ ರೀತಿಯಲ್ಲಿ ಮಲ್ಟಿಪ್ಲೆಕ್ಸ್ ಚಾವಣಿ ಇರುವುದು ಕಂಡು ಪ್ರೇಕ್ಷಕರಿಗೆ ಸಖತ್ ಕೋಪ ಬಂದಿದೆ.
“Heavy rain in Panjagutta, Hyderabad caused water leakage in PVR Mall’s cinema theater,disrupting movie screenings.Despite the leak,the management continued to show the film, sparking a heated argument between the audience and theater owners. Concerned about the risk of short 1/2 pic.twitter.com/RvvhIB82q2
— Reporter shabaz baba (@ShabazBaba) July 14, 2024
ಮಲ್ಟಿಪ್ಲೆಕ್ಸ್ ಒಳಗೆ ನೂರಾರು ಬಗೆಯ ವಿದ್ಯುತ್ ವೈರ್ ಇರುತ್ತವೆ. ಅನೇಕ ಎಲೆಕ್ಟ್ರಾನಿಕ್ ಉಪಕರಣಗಳು ಕಾರ್ಯನಿರ್ವಹಿಸುತ್ತ ಇರುತ್ತವೆ. ಇಂಥ ಸಂದರ್ಭದಲ್ಲಿ ಮಳೆ ನೀರು ಸೋರಿಕೆ ಆದರೆ ಶಾರ್ಟ್ ಸರ್ಕ್ಯೂಟ್ ಆಗುವ ಸಂಭವ ಹೆಚ್ಚಿರುತ್ತದೆ. ಆ ಕಾರಣದಿಂದ, ‘ಕಲ್ಕಿ 2898 ಎಡಿ’ ಸಿನಿಮಾ ಪ್ರದರ್ಶನದ ವೇಳೆ ಮಳೆ ನೀರು ಸುರಿದಾಗ ಪ್ರೇಕ್ಷಕರಿಗೆ ಆತಂಕ ಆಗಿದೆ. ಮಲ್ಟಿಪ್ಲೆಕ್ಸ್ನವರ ನಿರ್ಲಕ್ಷ್ಯಕ್ಕೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.