ಧಾರವಾಡದಲ್ಲಿ ಇವತ್ತು ಮತ್ತೇ ಜೋರು ಮಳೆ, ಜನ ಮತ್ತು ರೈತ ಸಮುದಾಯ ಖುಶ್!

ಅರುಣ್​ ಕುಮಾರ್​ ಬೆಳ್ಳಿ

Updated on: May 23, 2024 | 7:36 PM

ಇವತ್ತು ಬೆಂಗಳೂರಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸಿಂಗ್ ನಡೆಸಿದ ಬಳಿಕ ಮಾದ್ಯಮ ಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇ ತಿಂಗಳಲ್ಲಿ ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ನಾನಾ ಭಾಗಗಳಲ್ಲಿ ರೈತರು ಬಿತ್ತನೆ ಕೆಲಸ ಆರಂಭಿಸಿದ್ದಾರೆ, ಬಿತ್ತನೆ ಬೀಜಗಳ ಬಗ್ಗೆ ರೈತರು ಆತಂಕಪಡಬೇಕಿಲ್ಲ, ಸಾಕಷ್ಟು ಪ್ರಮಾಣದಲ್ಲಿ ಅವು ಲಭ್ಯವಿವೆ ಎಂದರು.

ಧಾರವಾಡ: ಮೊನ್ನೆ ಅಂದರೆ ಕಳೆದ ವಾರ ಹುಬ್ಬಳ್ಳಿಯಲ್ಲಿ (Hubballi) ಜೋರು ಮಳೆಯಾದಾಗ ಧಾರವಾಡದಲ್ಲಿ (Dharwad) ಆಗಿರಲಿಲ್ಲ. ಆದರೆ ಕಳೆದ ಎರಡು ಮೂರು ದಿನಗಳಿಂದ ಧಾರವಾಡ ನಗರದಲ್ಲಿ ಜೋರು ಮಳೆಯಾಗುತ್ತಿದೆ. ಇವತ್ತು ಸಾಯಂಕಾಲ ನಗರದಾದ್ಯಂತ ಗುಡುಗು ಸಿಡಿಲು ಸಹಿತ ಭಾರೀ ಮಳೆ. ನಗರದ ರಸ್ತೆಗಳಲ್ಲಿ ಬುಳುಬುಳು ನೀರು ಹರಿದು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ಗಮನಿಸಬಹುದು. ಮಳೆ ಸುರಿದ ರಭಸಕ್ಕೆ ಜನರು ಹೊರಗೆ ಬರುವ ಸಾಹಸ ಮಾಡಿಲ್ಲ. ಜನರ ಮಾತು ಹಾಗಿರಲಿ, ರಸ್ತೆಗಳ ಮೇಲೆ ವಾಹನ ಸಂಚಾರ ಸಹ ಕಾಣಲ್ಲ. ಈ ಭಾಗದ ರೈತರೆಲ್ಲ ಖುಷಿ ಪಡುತ್ತಿದ್ದಾರೆ. ಇವತ್ತು ಬೆಂಗಳೂರಲ್ಲಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸಿಂಗ್ ನಡೆಸಿದ ಬಳಿಕ ಮಾದ್ಯಮ ಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೇ ತಿಂಗಳಲ್ಲಿ ಈ ಸಲ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ನಾನಾ ಭಾಗಗಳಲ್ಲಿ ರೈತರು ಬಿತ್ತನೆ ಕೆಲಸ ಆರಂಭಿಸಿದ್ದಾರೆ, ಬಿತ್ತನೆ ಬೀಜಗಳ ಬಗ್ಗೆ ರೈತರು ಆತಂಕಪಡಬೇಕಿಲ್ಲ, ಸಾಕಷ್ಟು ಪ್ರಮಾಣದಲ್ಲಿ ಅವು ಲಭ್ಯವಿವೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Bangalore Rains: ಮತ್ತೆ ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರೀ ವರ್ಷಧಾರೆ; ಹಲವೆಡೆ ಟ್ರಾಫಿಕ್ ಜಾಮ್‌!

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.