ನೆಲಮಂಗಲ ಸುತ್ತಮುತ್ತ ಧಾರಾಕಾರ ಮಳೆ, ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗುವವರಿಗೆ ತಾಪತ್ರಯ!

|

Updated on: Aug 20, 2024 | 8:03 PM

ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಆಗಸ್ಟ್ 15 ರ ನಂತರ ಮೂರು ದಿನಗಳವರೆಗೆ ರಾಜ್ಯಾದ್ಯಂತ ಮಳೆಯಾಗಬೇಕಿತ್ತು, ಆದರೆ ಮಳೆ ಸುರಿಯುವುದು ಈಗಲೂ ಮುಂದುವರಿದಿದೆ.

ನೆಲಮಂಗಲ: ಸಂಜೆ 5ರಿಂದ 7 ಗಂಟೆ ನಡುವಿನ ಅವಧಿಯಲ್ಲಿ ಸುರಿಯುವ ಮಳೆಯನ್ನು ಅನಧಿಕೃತವಾಗಿ ಕಾರ್ಮಿಕ ವಿರೋಧಿ ಮಳೆ ಅನ್ನುತ್ತಾರೆ. ನಾವು ಇದಕ್ಕೂ ಮೊದಲ ಕಾರ್ಮಿಕ ಮಳೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋರ್ಟ್, ಕಚೇರಿಗಳಿಗೆ ಬೆಳಗ್ಗೆ ಹೋದವರು ಸಾಯಂಕಾಲದವರೆಗೆ ದುಡಿದು ಮನೆಗೆ ಹೋಗುವ ಸಮಯದಲ್ಲಿ ಒಂದೇ ಸಮ ಮಳೆ ಸುರಿಯಲಾರಂಭಿಸಿ ಮನೆಗೆ ಹೋಗುವುದನ್ನು ವಿಳಂಬಗೊಳಿಸಿದರೆ ಅದು ಕಾರ್ಮಿಕ ವಿರೋಧಿ ಮಳೆ ಅಲ್ಲದೆ ಮತ್ತೇನು? ದಿನವಿಡೀ ದುಡಿದವರು ತ್ವರಿತವಾಗಿ ಮನೆ ತಲುಪಿ ಹೆಂಡತಿ ಮಕ್ಕಳ ಮುಖ ನೋಡಿ ಸಂತಸಪಡುವ ಮತ್ತು ಹೆಂಡತಿ ಕೈಯಾರೆ ನೀಡುವ ಚಹಾ, ಕಾಫಿಯನ್ನು ಹೀರಲು ಕಾತುರರಾಗಿರುತ್ತಾರೆ. ಇದನ್ನು ಯಾಕೆ ಮತ್ತೊಮ್ಮೆ ಹೇಳಬೇಕಾಗಿದೆಯೆಂದರೆ, ಇವತ್ತು ಸಾಯಂಕಾಲ ಆಫೀಸುಗಳು ಮುಚ್ಚುವ ಸಮಯದಲ್ಲಿ ನೆಲಮಂಗಲ ಸುತ್ತಮುತ್ತ ಮಳೆ ಸುರಿಯಲಾರಂಭಿಸಿದೆ. ಪೀಣ್ಯ, ದಾಸರಹಳ್ಳಿ, ಶೆಟ್ಟಿಹಳ್ಳಿ, ಬಗಲಗುಂಟೆ, ಹೆಸರಘಟ್ಟ ಮೊದಲಾದ ಪ್ರದೇಶಗಳಲ್ಲಿ ಧಾರಾಕಾರ ಮಳೆ. ಕಾರಿಗಳಿದ್ದವರು ಮನೆ ತಲುಪುತ್ತಾರೆ, ಆದರೆ ಸೈಕಲ್, ಮತ್ತು ಬೈಕ್ ಗಳಲ್ಲಿ ಹೋಗುವವರು ಫ್ಳೈ ಓವರ್ ಗಳ ಕೆಳಗೆ ಮಳೆ ನಿಲ್ಲೋವರೆಗೆ ಆಶ್ರಯ ಪಡೆಯುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಋತುಚಕ್ರದ ದಿನಗಳಲ್ಲೂ ಬಿಡಲ್ಲ: ಗಂಡನ ವಿಕೃತ ಕಾಮಕ್ಕೆ ಬೇಸತ್ತು ಪೊಲೀಸ್ ಮೆಟ್ಟಿಲೇರಿದ ಪತ್ನಿ