ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿ ಮೈಸೂರು ವಕೀಲರ ಪ್ರತಿಭಟನೆ

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿ ಮೈಸೂರು ವಕೀಲರ ಪ್ರತಿಭಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 20, 2024 | 7:02 PM

ಮುಡಾ ಹಗರಣದ ವ್ಯಾಜ್ಯ ಈಗ ಕೋರ್ಟಿನ ಮೆಟ್ಟಿಲು ಹತ್ತಿದೆ. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ. ನಿನ್ನೆ ಹೈಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದ ನಂತರ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಆಗಸ್ಟ್ 29 ರವರೆಗೆ ವಿಚಾರಣೆ ನಡೆಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಉಚ್ಛ ನ್ಯಾಯಾಲಯ ಸೂಚಿಸಿತು.

ಮೈಸೂರು: ಮೂಲತಃ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವರ ತವರು ಜಿಲ್ಲೆಯ ವಕೀಲರ ಸಂಘ ನೈತಿಕ ಬೆಂಬಕ ನೀಡಿದೆ. ಸಿದ್ದರಾಮಯ್ಯನವರಿಗೆ ಮುಡಾ ಹಗರಣಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಮೈಸೂರು ವಕೀಲರ ಸಂಘ ನಗರದಲ್ಲಿಂದು ಪ್ರದರ್ಶನ ನಡೆಸಿತು. ಮೈಸೂರು ನಗರದ ಬೇರೆ ಬೇರೆ ಕೋರ್ಟ್ ಗಳಲ್ಲಿ ವಕೀಲ ವೃತ್ತಿ ನಡೆಸುವ ಸುಮಾರರು 60-70 ವಕೀಲರು ಇಂದು ಸಾಂಕೇತಿಕ ಪ್ರದರ್ಶನ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಾಲಿಡಾರಿಟಿ ಪ್ರದರ್ಶಿಸಿದರು. ಪ್ರತಿಭಟನೆ ನಡೆಸಿದ ವಕೀಲರ ಸಮೂಹದಲ್ಲಿ ಮಹಿಳಾ ಅಡ್ವೋಕೇಟ್ ಗಳು ಸಹ ಇದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಸಿದ್ದರಾಮಯ್ಯ ರಾಜಕೀಯಕ್ಕೆ ಧುಮುಕುವ ಮೊದಲು ಮೈಸೂರಲ್ಲಿ ವಕೀಲಿಕೆ ಮಾಡಿಕೊಂಡಿದ್ದರು. ತಮ್ಮ ಹಲವಾರು ಭಾಷಣಗಳಲ್ಲಿ ಅದನ್ನವರು ಹೇಳಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ವಿರುದ್ಧ ಕೂಡಲೇ ಕಾರ್ಯಪ್ರವೃತ್ತರಾಗುವ ರಾಜ್ಯಪಾಲ ಕುಮಾರಸ್ವಾಮಿ ವಿಷಯದಲ್ಲಿ ಮೌನವೇಕೆ? ಸಿದ್ದರಾಮಯ್ಯ