ನನ್ನ ವಿರುದ್ಧ ಕೂಡಲೇ ಕಾರ್ಯಪ್ರವೃತ್ತರಾಗುವ ರಾಜ್ಯಪಾಲ ಕುಮಾರಸ್ವಾಮಿ ವಿಷಯದಲ್ಲಿ ಮೌನವೇಕೆ? ಸಿದ್ದರಾಮಯ್ಯ

ನನ್ನ ವಿರುದ್ಧ ಕೂಡಲೇ ಕಾರ್ಯಪ್ರವೃತ್ತರಾಗುವ ರಾಜ್ಯಪಾಲ ಕುಮಾರಸ್ವಾಮಿ ವಿಷಯದಲ್ಲಿ ಮೌನವೇಕೆ? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 20, 2024 | 4:12 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿರುವುದರಲ್ಲಿ ಪಾಯಿಂಟ್ ಇರೋದು ಗೊತ್ತಾಗುತ್ತದೆ. ರಾಜ್ಯಪಾಲರು ಈಗ ದ್ವಂದ್ವದಲ್ಲಿರಬಹುದು. ಒಂದು ಪಕ್ಷ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ, ಕೇಂದ್ರ ಸಚಿವನಿಗೆ ಸಂಕಷ್ಟ ಎದುರಾಗಬಹುದು, ಯಾಕೆಂದರೆ ಅವರ ವಿರುದ್ಧ ಎಸ್ಐಟಿ ಚಾರ್ಜ್​​ಶೀಟ್ ಸಲ್ಲಿಸಿದೆ, ದೂರಲ್ಲ.

ಬೆಂಗಳೂರು: ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಚಾರದಲ್ಲಿ ತನ್ನ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರ ನಡುವೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ತಾರತಮ್ಯವೆಸಗಿದ್ದು ಯಾಕೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳು ಲೋಕಾಯುಕ್ತ ಎಸ್ಐಟಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ರಾಜ್ಯಪಾಲರಿಗೆ ಪತ್ರ ಬರೆದಿರುವುದರ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಳೆದ ವರ್ಷ ನವೆಂಬರ್ ಕೊನೆಯ ವಾರದಲ್ಲಿ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಎಸ್ಐಟಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿತ್ತು, ರಾಜ್ಯಪಾಲರು ನೀಡಿರಲಿಲ್ಲ.

ಅದರೆ ತನ್ನ ವಿಷಯದಲ್ಲಿ ರಾಜ್ಯಪಾಲರು ಭಿನ್ನ ಧೋರಣೆ ತಳೆದು ಒಂದು ದಿನದೊಳಗೆ ಶೋಕಾಸ್ ನೋಟೀಸ್ ನೀಡುತ್ತಾರೆ, ಅವರು ಯಾಕೆ ಸೆಲೆಕ್ಟಿವ್ ಆಗಿದ್ದಾರೆ ಅಂತ ಅರ್ಥಮಾಡಿಕೊಳ್ಳವುದು ಕಷ್ಟವೇನಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಎಸ್​ಐಟಿ ರಾಜ್ಯಪಾಲರನ್ನು ಮತ್ತೊಮ್ಮೆ ಸಂಪರ್ಕಿಸಿದೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯಪಾಲರ ಪ್ರಾಸಿಕ್ಯೂಷನ್​ಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್